alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾದಲ್ಲಿ ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ

ಟೂರ್ನಮೆಂಟ್ ಗಾಗಿ ಶ್ರೀಲಂಕಾಕ್ಕೆ ತೆರಳಿದ್ದ ಭಾರತದ ಅಂಡರ್ 17 ತಂಡದ ಕ್ರಿಕೆಟಿಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗುಜರಾತ್ ಮೂಲದ 12 ವರ್ಷದ ಈ ಕ್ರಿಕೆಟಿಗ ಅಂಡರ್ 17 ತಂಡದಲ್ಲಿದ್ದು, ಟೂರ್ನಮೆಂಟ್ ಗಾಗಿ ತಂಡದ ಜೊತೆ ಶ್ರೀಲಂಕಾದ ಪಮುನುಗಾಮಕ್ಕೆ ತೆರಳಿದ್ದ. ಹೋಟೆಲ್ ನಲ್ಲಿ ತಂಗಿದ್ದ ವೇಳೆ ಮಂಗಳವಾರ ಸಂಜೆ ತಂಡದ ನಾಲ್ವರ ಜೊತೆ ಹೋಟೆಲ್ ಆವರಣದಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಗೆ ಈಜಾಡಲು ತೆರಳಿದ್ದು, ಈ ವೇಳೆ ದುರಂತ ಸಂಭವಿಸಿದೆ.

ನೀರಿನಲ್ಲಿ ಮುಳುಗಿದ್ದ ಕ್ರಿಕೆಟಿಗನನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...