alex Certify
ಕನ್ನಡ ದುನಿಯಾ       Mobile App
       

Kannada Duniya

ರಾವಣನ ಸಾಮ್ರಾಜ್ಯದಲ್ಲಿ ಟೀಂ ಇಂಡಿಯಾ ಆಟಗಾರರು

ashok-vatika-visit-twitter_806x605_41502435759

ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಟಗಾರರು ದ್ವೀಪರಾಷ್ಟ್ರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ರಾವಣ, ಸೀತೆಯನ್ನು ಬಂಧಿಸಿಟ್ಟಿದ್ದ ಸ್ಥಳವನ್ನು ಬ್ಲೂ ಬಾಯ್ಸ್ ವೀಕ್ಷಣೆ ಮಾಡಿದ್ರು. ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ಈ ಸ್ಥಳ ರಾವಣನ ಸಾಮ್ರಾಜ್ಯವಾಗಿದ್ದು, ಶ್ರೀಲಂಕಾದ ಸೀತಾ ಎಲಿಯಾ ಎಂಬಲ್ಲಿದೆ.

ಅಶೋಕ್ ವಟಿಕಾ ಎಂಬ ಈ ಉದ್ಯಾನವನದಲ್ಲಿ ರಾವಣ, ಸೀತೆಯನ್ನು ಬಂಧಿಸಿ ಇಟ್ಟಿದ್ದ ಅಂತಾ ಪುರಾಣಗಳು ಹೇಳುತ್ತವೆ. ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್, ಅಶೋಕ್ ವಟಿಕಾಗೆ ಭೇಟಿ ನೀಡಿರುವ ಫೋಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕುಲದೀಪ್ ಯಾದವ್, ವೃದ್ಧಿಮಾನ್ ಸಹಾ, ಕೆ.ಎಲ್.ರಾಹುಲ್, ಇಶಾಂತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಸೀತಾ ಎಲಿಯಾಗೆ ಭೇಟಿ ನೀಡಿದ್ರು. ಹನುಮಂತನ ಪಾದದ ಬಳಿ ಪತ್ನಿಯೊಂದಿಗೆ ನಿಂತಿರುವ ಫೋಟೋವನ್ನು ಕೂಡ ಉಮೇಶ್ ಯಾದವ್ ಶೇರ್ ಮಾಡಿದ್ದಾರೆ. ಆದ್ರೆ ನಾಯಕ ಕೊಹ್ಲಿ ಯಾವುದೇ ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ. ಸರಣಿಯಲ್ಲಿ ಈಗಾಗ್ಲೇ 2-0 ಮುನ್ನಡೆಯಲ್ಲಿರುವ ಟೀಂ ಇಂಡಿಯಾ, ಪಲ್ಲೆಕೆಲೆ ಟೆಸ್ಟ್ ನಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.

umesh

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...