alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಂಪಿಯನ್ಸ್ ಟ್ರೋಫಿಗಾಗಿ ಮೇ 8 ರಂದು ಟೀಂ ಇಂಡಿಯಾ ಆಯ್ಕೆ

icc_champs_trophy_1494044301_749x421

ಹಗ್ಗ-ಜಗ್ಗಾಟದ ನಂತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳೋದು ಖಚಿತವಾಗಿದೆ. ಸೋಮವಾರ ಮೇ 8 ರಂದು ಟೀಂ ಇಂಡಿಯಾ ಆಯ್ಕೆ ನಡೆಯಲಿದೆ. ವಿರಾಟ್ ಕೊಹ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯ್ಕೆ ಸಮಿತಿ ಜೊತೆ ಮಾತುಕತೆ ನಡೆಸಲಿದ್ದಾರೆ.

ಟೀಂ ಇಂಡಿಯಾದಿಂದ 15 ಆಟಗಾರರ ಪಟ್ಟಿಯನ್ನು ಐಸಿಸಿಗೆ ನೀಡಲು ಏಪ್ರಿಲ್ 25 ಕೊನೆಯ ದಿನವಾಗಿತ್ತು. ಭಾರತವನ್ನು ಹೊರತುಪಡಿಸಿ ಉಳಿದ 7 ದೇಶಗಳು ತಮ್ಮ ತಂಡದ ಪಟ್ಟಿಯನ್ನು ಐಸಿಸಿಗೆ ರವಾನೆ ಮಾಡಿವೆ. ಆದ್ರೆ ಅವಧಿ ಮುಗಿದ್ರೂ ಬಿಸಿಸಿಐ ಮಾತ್ರ ಆಟಗಾರರ ಪಟ್ಟಿಯನ್ನು ಐಸಿಸಿಗೆ ನೀಡಿರಲಿಲ್ಲ. ಬಿಸಿಸಿಐ ಹಾಗೂ ಐಸಿಸಿ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣವಾಗಿತ್ತು. ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಮೈದಾನಕ್ಕಿಳಿಯೋದಿಲ್ಲ ಎಂಬ ಬೇಸರ ಅಭಿಮಾನಿಗಳನ್ನು ಕಾಡಿತ್ತು.

ಐಸಿಸಿಯ ಎರಡನೇ ದೊಡ್ಡ ಟೂರ್ನ್ ಮೆಂಟ್ ಚಾಂಪಿಯನ್ಸ್ ಟ್ರೋಫಿಯಾಗಿದೆ. ಜೂನ್ 1ರಿಂದ ಪಂದ್ಯ ಶುರುವಾಗಲಿದ್ದು, ಜೂನ್ 4ರಂದು ಟೀಂ ಇಂಡಿಯಾ ಪಾಕಿಸ್ತಾನದ ಜೊತೆ ಸೆಣೆಸಾಟ ನಡೆಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...