alex Certify
ಕನ್ನಡ ದುನಿಯಾ       Mobile App
       

Kannada Duniya

IPL ಗಾಗಿ ವಿರಾಟ್ ಕೊಹ್ಲಿ ಹೊಸ ಲುಕ್…!

ಕ್ರೀಡಾಪಟುಗಳ ಅದರಲ್ಲೂ ಕ್ರಿಕೆಟಿಗರ ಹೇರ್ ಸ್ಟೈಲ್ ಬಗ್ಗೆ ಅಭಿಮಾನಿಗಳಿಗೆ ಸಖತ್ ಕ್ರೇಝ್ ಇದೆ. ಸೆಲೆಬ್ರಿಟಿ ಕ್ರಿಕೆಟರ್ಸ್ ಅಂತೂ ದಿನಕ್ಕೊಂದು ಬಗೆಯ ಕೇಶ ವಿನ್ಯಾಸ ಮಾಡಿಸಿಕೊಂಡು ಗಮನ ಸೆಳೆಯುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸ್ಟೈಲ್ ಐಕಾನ್.

ಈಗ ಐಪಿಎಲ್ ಗಾಗಿ ಕೊಹ್ಲಿ ಹೊಸ ಬಗೆಯ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ಆಲಿಮ್ ಹಕೀಂ, ಕೊಹ್ಲಿಗೆ ಹೊಸ ಕೇಶ ವಿನ್ಯಾಸ ಮಾಡಿದ್ದಾರೆ. ತಮ್ಮ ನ್ಯೂ ಲುಕ್ ಅನ್ನು ಕೊಹ್ಲಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಕೊಹ್ಲಿ ಹೊಸ ಟ್ಯಾಟೂ ಸಹ ಹಾಕಿಸಿಕೊಂಡಿದ್ದರು.

ಕೈಲಾಸ ಪರ್ವತ ಹಾಗೂ ಮಾನಸ ಸರೋವರದ ಹಿನ್ನೆಲೆಯಲ್ಲಿ ಶಿವ ಧ್ಯಾನ ಮಾಡುತ್ತಿರುವ ಚಿತ್ರ ಕೊಹ್ಲಿಯ ಮೊಣಕೈ ಮೇಲೆ ಅರಳಿದೆ. ಬೈಸಿಪ್ಸ್ ಮೇಲೆ ಸಮುರೈ ವಾರಿಯರ್ ಅನ್ನು ಚಿತ್ರಿಸಲಾಗಿದೆ. ಇನ್ನೊಂದು ಕೈಮೇಲೆ ಹಿಂದಿಯಲ್ಲಿ ಕೊಹ್ಲಿ, ತಂದೆ-ತಾಯಿಯ ಹೆಸರು, ಹಾಗೂ ಟೆಸ್ಟ್ ಮತ್ತು ಓಡಿಐನ ಕ್ಯಾಪ್ ನಂಬರ್ ಇದೆ. ಓಂ ಎಂಬ ಅಕ್ಷರವನ್ನು ಸಹ ಕೊಹ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...