alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರನ್ ಗಳಿಸಲು 54 ಬಾಲ್ ಎದುರಿಸಿದ ಪೂಜಾರ

ದಕ್ಷಿಣ ಅಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲುವ ಮೂಲಕ ಸರಣಿಯನ್ನು ಕೈ ಚೆಲ್ಲಿದೆ. ಬುಧವಾರದಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಮುಖ ಉಳಿಸಿಕೊಳ್ಳುವ ಯತ್ನದಲ್ಲಿದೆ.

ವೈಟ್ ವಾಶ್ ನಿಂದ ತಪ್ಪಿಸಿಕೊಳ್ಳಲು ಮೂರನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾದ ಮೊದಲ ದಿನದ ಆಟ ಉತ್ತಮವಾಗೇನೂ ಇರಲಿಲ್ಲ. ರನ್ ಗಳಿಸಲು ಆಟಗಾರರು ಪರದಾಡಿದ್ದು, ವಿಕೆಟ್ ಉಳಿಸಿಕೊಳ್ಳುವತ್ತ ಗಮನ ಹರಿಸಿದ ಚೇತೇಶ್ವರ ಪೂಜಾರ ಮೊದಲ ರನ್ ಗಳಿಸಲು ಬರೋಬ್ಬರಿ 54 ಬಾಲ್ ಗಳನ್ನು ಆಡಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ 30 ರನ್ ಗಳಿಸಿದ್ದ ಚೇತೇಶ್ವರ ಪೂಜಾರ, ಎರಡನೇ ಟೆಸ್ಟ್ ನಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ರನ್ ಔಟ್ ಆಗುವ ಮೂಲಕ ವಿಶಿಷ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಮೂರನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಪೂಜಾರ, ಅರ್ಧ ಸೆಂಚುರಿ ಗಳಿಸಿದರೂ ಮೊದಲ ರನ್ ಗಳಿಸಲು ಮಾತ್ರ ತಿಣುಕಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 54 ಬಾಲ್ ಗಳನ್ನು ಎದುರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...