alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ಲಿನ್ ನಲ್ಲಿ ಭಿಕ್ಷೆ ಬೇಡಬೇಕಾಯ್ತು ಭಾರತದ ಅಥ್ಲೀಟ್

athlete

ಸರ್ಕಾರ ಮಂಜೂರು ಮಾಡಿದ ಹಣ ಸಕಾಲಕ್ಕೆ ದೊರೆಯದೇ ಇದ್ದಿದ್ರಿಂದ ಭಾರತದ ಪ್ಯಾರಾ ಅಥ್ಲೀಟ್ ಕಂಚನ್ಮಾಲಾ ಪಾಂಡೆ ಬರ್ಲಿನ್ ನಲ್ಲಿ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಂಚನ್ಮಾಲಾಗೆ ಕಣ್ಣು ಕಾಣಿಸುವುದಿಲ್ಲ, ಆಕೆ ಎಸ್ 11 ವಿಭಾಗದ ಈಜುಗಾರ್ತಿ.

ಕಂಚನ್ಮಾಲಾ ಹಾಗೂ ಇತರ ಐವರು ಅಥ್ಲೀಟ್ ಗಳು ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ಷಿಪ್ ಗಾಗಿ ಬರ್ಲಿನ್ ಗೆ ತೆರಳಿದ್ರು. ಜುಲೈ 3 ರಿಂದ 9ರವರೆಗೆ ಟೂರ್ನಿ ಆಯೋಜಿಸಲಾಗಿತ್ತು. ಅಲ್ಲಿಗೆ ತಲುಪಿದ ಮೇಲೂ ಸರ್ಕಾರ ಮಂಜೂರು ಮಾಡಿದ ಹಣ ಅಥ್ಲೀಟ್ ಗಳಿಗೆ ದೊರೆತಿಲ್ಲ.

ಕೈಯಲ್ಲಿ ಹಣವಿಲ್ಲದೆ ಕಂಚನ್ಮಾಲಾ ಕಂಗಾಲಾಗಿ ಹೋಗಿದ್ದಾರೆ. ಈ ವರ್ಷ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ಷಿಪ್ ಗೆ ಆಯ್ಕೆಯಾದ ಏಕೈಕ ಆಟಗಾರ್ತಿ ಕಂಚನ್ಮಾಲಾ. ಟೂರ್ನಿಯಲ್ಲಿ ಭಾಗವಹಿಸಲೆಂದೇ ಅವರು 5 ಲಕ್ಷ ರೂಪಾಯಿ ಸಾಲ ಕೂಡ ಮಾಡಿದ್ದಾರೆ.

ಬರ್ಲಿನ್ ನಲ್ಲಿ ಹೋಟೆಲ್ ಮತ್ತು ಊಟಕ್ಕಾಗಿ ಸುಮಾರು 110,000 ರೂಪಾಯಿ ಖರ್ಚಾಗಿದೆ. ಸರ್ಕಾರದಿಂದ ಆ ಹಣ ಮರಳಿ ದೊರೆಯುತ್ತದೋ ಇಲ್ಲವೋ ಅನ್ನೋ ಸ್ಪಷ್ಟತೆ ಕೂಡ ಇಲ್ಲ. ದೂರ ದೇಶದಲ್ಲಿ ಇಂತಹ ದುಃಸ್ಥಿತಿ ಬರಬಹುದು ಅನ್ನೋ ಕಲ್ಪನೆ ಕೂಡ ಇರಲಿಲ್ಲ ಅಂತಾ ಕಂಚನ್ಮಾಲಾ ಹೇಳಿದ್ದಾರೆ.

ಸರ್ಕಾರದ ನಿರ್ಲಕ್ಷವನ್ನು ಅಭಿನವ್ ಬಿಂದ್ರಾ ಸೇರಿದಂತೆ ಹಲವು ಅಥ್ಲೀಟ್ ಗಳು ಖಂಡಿಸಿದ್ದಾರೆ. ಅದರ ಬೆನ್ನಲ್ಲೇ ಘಟನೆ ಬಗ್ಗೆ ತನಿಖೆಗೆ ಆದೇಶಿಸುವುದಾಗಿ ಟ್ವೀಟ್ ಮಾಡಿ ಸಚಿವ ವಿಜಯ್ ಗೋಯಲ್ ಕೈತೊಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...