alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಮ್ಮಗ ಸ್ಟಾರ್ ಕ್ರಿಕೆಟರ್, ಆಟೋ ಓಡಿಸಿ ಜೀವನ ಸಾಗಿಸ್ತಿದ್ದಾರೆ ಅಜ್ಜ

bumrah

ಜಸ್ಪ್ರೀತ್ ಬುಮ್ರಾಗೆ ಬಯಸಿದ್ದೆಲ್ಲವೂ ಸಿಕ್ಕಿದೆ. ಟೀಂ ಇಂಡಿಯಾದಲ್ಲಿ ಸ್ಥಾನ, ಐಪಿಎಲ್ ನಲ್ಲೂ ನೇಮ್, ಫೇಮ್….ಈಗ ಅವರೊಬ್ಬ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟರ್. ಆದ್ರೆ ಅವರ ಕುಟುಂಬದ ಆರ್ಥಿಕ ಸ್ಥಿತಿ ಮಾತ್ರ ಸುಧಾರಿಸಿಲ್ಲ.

ಜಸ್ ಪ್ರೀತ್ ಬುಮ್ರಾ ಅವರ ಅಜ್ಜ ಸಂತೋಷ್ ಸಿಂಗ್ ಬುಮ್ರಾ ಈಗಲೂ ಜೀವನ ನಿರ್ವಹಣೆಗಾಗಿ ಆಟೋ ಓಡಿಸ್ತಾರೆ. 10 ವರ್ಷಗಳ ಹಿಂದೆ ಅಹಮದಾಬಾದ್ ನಿಂದ ಅವರು ಉತ್ತರಾಖಂಡ್ ಗೆ ಬಂದು ನೆಲೆಸಿದ್ದಾರೆ. ಹಿಂದೊಮ್ಮೆ ಒಳ್ಳೆ ಉದ್ಯಮಿಯಾಗಿ ಹೆಸರು ಮಾಡಿದ್ರು.

ಅಹಮದಾಬಾದ್ ನಲ್ಲಿ ಸಂತೋಷ್ ಸಿಂಗ್ ಅವರದ್ದೇ ಮೂರು ಕಾರ್ಖಾನೆಯಿತ್ತು. ಜಸ್ ಪ್ರೀತ್ ಬುಮ್ರಾ ತಂದೆ ಜಸ್ವೀರ್ ಸಿಂಗ್ ರೊಂದಿಗೆ ಸೇರಿ ಅವರು ಕಾರ್ಖಾನೆಗಳನ್ನು ನಡೆಸ್ತಾ ಇದ್ರು. ಆದ್ರೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು ಎಲ್ಲವನ್ನೂ ಕಳೆದುಕೊಂಡಿದ್ದಾರೆ.

mu_1499155970

ಜಸ್ವೀರ್ ಸಿಂಗ್ ಮರಣದ ನಂತರ ಉದ್ಯಮವನ್ನು ಮುನ್ನಡೆಸಲು ಸಂತೋಷ್ ಸಿಂಗ್ ಬಳಿ ಸಾಧ್ಯವಾಗಲೇ ಇಲ್ಲ. ಲಕ್ಷಾಂತರ ರೂಪಾಯಿ ಸಾಲವೂ ಹೆಗಲೇರಿತ್ತು. ಬೇರೆ ದಾರಿ ಕಾಣದೆ ಅಹಮದಾಬಾದ್ ನಿಂದ ಉತ್ತರಾಖಂಡ್ ಗೆ ವಲಸೆ ಬಂದ್ರು.

ಬದುಕಿನ ಬಂಡಿ ಎಳೆಯಲು ಆಟೋ ಓಡಿಸಿ ಬಿಡಿಗಾಸು ಸಂಪಾದಿಸ್ತಾರೆ. ಸದ್ಯ ಜಸ್ ಪ್ರೀತ್ ಬುಮ್ರಾ ಯಶಸ್ವಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಹಣದ ಸಮಸ್ಯೆಯೂ ಅವರಿಗಿಲ್ಲ. ಈಗಲಾದ್ರೂ ಅಜ್ಜನ ಬಗ್ಗೆ ಕಿಂಚಿತ್ ಕಾಳಜಿ ತೋರಿಸಲಿ ಅನ್ನೋದೇ ಎಲ್ಲರ ಆಶಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...