alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಕ್ಸಿಂಗ್ ಪಂದ್ಯದ ವೇಳೆಯೇ ಕಾದಿತ್ತು ದುರ್ವಿಧಿ

ಸಿಂಗಾಪೂರ: ಭಾರತೀಯ ಮೂಲದ ಬಾಡಿ ಬಿಲ್ಡರ್, ಕಿಕ್ ಬಾಕ್ಸಿಂಗ್ ಪಂದ್ಯದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಸಿಂಗಾಪೂರದಲ್ಲಿ ನಡೆದಿದೆ.

ಪ್ರದೀಪ್ ಸುಬ್ರಹ್ಮಣ್ಯನ್(32) ಮೃತಪಟ್ಟವರು. ಏಷಿಯನ್ ಫೈಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಅವರು ಸ್ಟೀವ್ ಲಿಮ್ ಅವರನ್ನು ಎದುರಿಸಿದ್ದಾರೆ.

ಆರಂಭದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಮೇಲುಗೈ ಸಾಧಿಸಿದ್ದ ಅವರು, ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರ ಮೂಗಿನಿಂದ ರಕ್ತ ಬಂದಿದ್ದು, ರೆಫರಿ ಪಂದ್ಯವನ್ನು ನಿಲ್ಲಿಸಿ ಸ್ಟೀವ್ ಲಿಮ್ ವಿಜೇತರಾಗಿದ್ದಾಗಿ ಘೋಷಿಸಿದ್ದಾರೆ.

ಪ್ರದೀಪ್ ಸುಬ್ರಹ್ಮಣ್ಯನ್ ಅವರು ಹೃದಯಾಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರದೀಪ್ ಸಿಂಗಾಪೂರದ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್ ಫೆಡರೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...