alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕರಾಗಲಿದ್ದಾರೆ ಸ್ಪಿನ್ನರ್ ಬಜ್ಜಿ

bhajji

ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಡುಗಾರರಾಗುವ ಪ್ರಯತ್ನದಲ್ಲಿದ್ದಾರೆ. ಸಂಯೋಜಕ ಮಿಥುನ್ ಸಂಯೋಜಿಸಿರುವ ಸೊಲೊ ಹಾಡಿಗೆ ಧ್ವನಿ ನೀಡಲಿದ್ದಾರೆ ಹರ್ಭಜನ್. ದೇಶಕ್ಕೆ ಕಾಣಿಕೆ ನೀಡಿದ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ಹಾಡು ಇದಾಗಿದೆ.

ಈ ಕಲ್ಪನೆಯನ್ನು ಹರ್ಭಜನ್ ನನ್ನ ಜೊತೆ ಹಂಚಿಕೊಂಡಿದ್ದರು. ಅನೇಕ ವರ್ಷಗಳಿಂದ ನಾವಿಬ್ಬರೂ ಸ್ನೇಹಿತರು. ಅನೇಕ ಬಾರಿ ಹರ್ಭಜನ್ ಸಂಗೀತದಲ್ಲಿ ಅವರಿಗಿರುವ ಆಸಕ್ತಿ ಬಗ್ಗೆ ನನ್ನಲ್ಲಿ ಹೇಳಿದ್ದಾರೆ. ನಮ್ಮ ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆಯನ್ನು ಜಗತ್ತಿಗೆ ಸಾರಿ ಹೇಳಲು ಹರ್ಭಜನ್ ಬಯಸಿದ್ದಾರೆಂದು ಮಿಥುನ್ ಹೇಳಿದ್ದಾರೆ.

ಈ ಹಾಡಿನಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ವಿಭಿನ್ನ ಜನರ ವಾಸ್ತವ ಜೀವನದ ದೃಶ್ಯಗಳಿರಲಿವೆ. ಇದಕ್ಕೆ ಹರ್ಭಜನ್ ಸಿಂಗ್ ಧ್ವನಿ ನೀಡಲಿದ್ದಾರೆ. ಹಿಂದಿ ಹಾಗೂ ಇಂಗ್ಲೀಷ್ ಮಿಶ್ರಿತ ಈ ಹಾಡಿನ ವಿಡಿಯೋ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...