alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ ಆಟಗಾರರ ಊಟದಲ್ಲಿ ಸಿಗ್ತಿದೆ ಕೂದಲು, ಹುಳ

ಒಂದು ಕಡೆ ಕ್ರೀಡೆಯಲ್ಲಿ ಸುಧಾರಣೆ ತರುವುದಾಗಿ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹೇಳ್ತಿದ್ದಾರೆ. ಇನ್ನೊಂದು ಕಡೆ ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರಿಗೆ ಒಳ್ಳೆ ಊಟದ ಅದೃಷ್ಟವೇ ಇಲ್ಲ. ಭಾರತದ  ಹಾಕಿ ಆಟಗಾರರಿಗೆ ರಾಷ್ಟ್ರೀಯ ಕ್ಯಾಂಪ್ ನಲ್ಲಿ ಕೆಟ್ಟ ಆಹಾರವನ್ನು ನೀಡಲಾಗ್ತಿದೆ.

ಹಾಕಿ ಕೋಚ್ ಹರೇಂದ್ರ ಸಿಂಗ್ ಈ ಬಗ್ಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಶಿಬಿರ ನಡೆಯುತ್ತಿದೆ. ಅಲ್ಲಿ ಭಾರತೀಯ ಹಾಕಿ ಆಟಗಾರರಿಗೆ ಕೆಟ್ಟ ಆಹಾರ ನೀಡಲಾಗ್ತಿದೆಯಂತೆ. ಈ ಬಗ್ಗೆ ಜೂನ್ 9 ರಂದೇ ಭಾರತೀಯ ಹಿರಿಯ ಪುರುಷರ ಹಾಕಿ ತಂಡದ ಕೋಚ್ ಹರೇಂದ್ರ ಹಾಕಿ ಇಂಡಿಯಾಕ್ಕೆ ದೂರು ನೀಡಿದ್ದಾರೆ.

ಶಿಬಿರದಲ್ಲಿ ಕಳಪೆ ಮಟ್ಟದ ಆಹಾರ ನೀಡಲಾಗ್ತಿದೆ. ನೈರ್ಮಲ್ಯದ ಬಗ್ಗೆಯೂ ಗಮನ ನೀಡಲಾಗ್ತಿಲ್ಲ. ಆಹಾರದಲ್ಲಿ ಕೀಟ ಹಾಗೂ ಕೂದಲು ಸಿಗುತ್ತದೆ. ಹಾಕಿ ಆಟಗಾರರಿಗೆ ಮಾಂಸಹಾರವನ್ನು ನೀಡಲಾಗ್ತಿಲ್ಲವೆಂದು ಹರೇಂದ್ರ ಸಿಂಗ್ ದೂರಿದ್ದಾರೆ. ಕ್ರೀಡಾ ಸಚಿವರು 48 ಗಂಟೆಯಲ್ಲಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಭರವಸೆ ಇನ್ನೂ ಈಡೇರಿಲ್ಲ. ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯನ್ ಗೇಮ್ಸ್ ಗೆ ಆಟಗಾರರು ಸಿದ್ಧವಾಗ್ತಿದ್ದಾರೆ. ಇಂಥ ಸಂದರ್ಭದಲ್ಲಿ ಆಟಗಾರರಿಗೆ ಸೂಕ್ತ ಆಹಾರ ನೀಡುವುದು ಬಹಳ ಮುಖ್ಯವೆಂದು ಹರೇಂದ್ರ ಸಿಂಗ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...