alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆ ಪ್ರಸಾರ ಮಾಡದ್ದಕ್ಕೆ ಈ ಕ್ರೀಡಾಪಟು ಮಾಡಿದ್ದೇನು..?

vandanakatariahockey_1480665581

ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಪ್ರಸಾರ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದ್ರೆ ಕೆಲವು ಥಿಯೇಟರ್ ಗಳು ಇದನ್ನು ಪಾಲಿಸುತ್ತಿಲ್ಲ.

ಇದ್ರಿಂದ ಭಾರತದ ಮಹಿಳಾ ಹಾಕಿ ತಂಡದ ನಾಯಕಿ ವಂದನಾ ಕಟಾರಿಯಾ ಅವರಿಗೆ ಬೇಸರವಾಗಿದೆ. ಹಾಗಂತ ಅವರೇನೂ ಪ್ರತಿಭಟನೆಗೆ ಇಳಿದಿಲ್ಲ. ಸೈಲೆಂಟಾಗಿ ಥಿಯೇಟರ್ ನಿಂದ ಎದ್ದು ಹೋಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹಾಕಿ ಸರಣಿ ಮುಗಿಸಿಕೊಂಡು ಬಂದ ವಂದನಾ ಹರಿದ್ವಾರದ ಸಿನಿಪ್ಲೆಕ್ಸ್ ಒಂದರಲ್ಲಿ ‘ಡಿಯರ್ ಜಿಂದಗಿ’ ಸಿನಿಮಾ ನೋಡಲು ಕುಟುಂಬದವರ ಜೊತೆ ಬಂದಿದ್ರು. ಚಿತ್ರ ಶುರುವಾಗುವ ಮುನ್ನ ಅಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲೇ ಇಲ್ಲ.

ಕೂಡಲೇ ಅಲ್ಲಿಂದ ಎದ್ದು ಹೋದ ವಂದನಾ ಸಿನಿಪ್ಲೆಕ್ಸ್ ಮುಖ್ಯಸ್ಥ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ತಮಗೆ ಇನ್ನೂ ಸೂಚನೆ ಬಂದಿಲ್ಲ ಅಂತಾ ಸಂಜೀವ್ ಸಬೂಬು ಹೇಳಿದ್ದಾರೆ. ರಾಷ್ಟ್ರಗೀತೆಯನ್ನು ಗೌರವಿಸಲು ಕೋರ್ಟ್ ಸೂಚನೆಯ ಅಗತ್ಯವಿಲ್ಲ ಎಂದ ವಂದನಾ, ಸಿನಿಮಾ ನೋಡದೇ ಹೊರಬಂದ್ರು. ನಿಜಕ್ಕೂ ವಂದನಾ ಅವರ ರಾಷ್ಟ್ರಭಕ್ತಿ ಪ್ರತಿಯೊಬ್ಬ ಭಾರತೀಯರಿಗೂ ಮಾದರಿಯಾಗುವಂತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...