alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಯಿಂದ ಸಂಕಷ್ಟಕ್ಕೆ ಸಿಲುಕಿದ ಭಾರತ ಹಾಕಿ ತಂಡದ ನಾಯಕ

421743-sardar-getty

ರಿಯೋ ಒಲಂಪಿಕ್ಸ್ ಗಾಗಿ ಭಾರತ ಹಾಕಿ ತಂಡ ಸಿದ್ದವಾಗುತ್ತಿರುವ ಸಂದರ್ಭದಲ್ಲೇ ತಂಡದ ನಾಯಕ ಸರ್ದಾರ್ ಸಿಂಗ್ ತಮ್ಮ ಬಹು ಕಾಲದ ಗೆಳತಿ ಬ್ರಿಟನ್ ಸಂಜಾತೆ ಅಶ್ಪಾಲ್ ಕೌರ್ ಬೋಗಾಲ್ ಕಾರಣಕ್ಕಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ದಾರ್ ಸಿಂಗ್ ವಿವಾಹವಾಗುವುದಾಗಿ ನಂಬಿಸಿ ತಮ್ಮನ್ನು ದೈಹಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆಂದು ಲೂಧಿಯಾನಾದ ಶ್ರೀ ಬೈನಿ ಸಾಹೀಬ್ ನಲ್ಲಿರುವ ಕೂಮ್ ಕಲನ್ ಪೊಲೀಸ್ ಠಾಣೆಯಲ್ಲಿ ಅಶ್ಪಾಲ್ ಕೌರ್ ಬೋಗಾಲ್ ದೂರು ದಾಖಲಿಸಿದ್ದಾರೆ.

ಗ್ರೇಟ್ ಬ್ರಿಟನ್ ನ ಅಂಡರ್ 19 ಮಹಿಳಾ ಹಾಕಿ ತಂಡದ ಆಟಗಾರ್ತಿಯೂ ಆಗಿರುವ ಅಶ್ಪಾಲ್ ಕೌರ್, ಬಹಳ ವರ್ಷಗಳಿಂದಲೂ ಸರ್ದಾರ್ ಸಿಂಗ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಒಮ್ಮೆ ಸಿರ್ಸಾದ ಸಂತ್ ನಗರದಲ್ಲಿರುವ ಸರ್ದಾರ್ ಸಿಂಗ್ ನಿವಾಸಕ್ಕೂ ಭೇಟಿ ನೀಡಿ ಈ ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿಕೊಂಡಿದ್ದರು.

ಸರ್ದಾರ್ ಸಿಂಗ್ ಜೊತೆ ದೈಹಿಕ ಸಂಬಂಧ ಹೊಂದಿದ ಕಾರಣಕ್ಕೆ ತಾವು ಗರ್ಭಿಣಿಯೂ ಆಗಿದ್ದು, ನಂತರ ಅಬಾರ್ಷನ್ ಮಾಡಿಸಿಕೊಂಡಿರುವುದಾಗಿ ಹೇಳಿರುವ ಅಶ್ಪಾಲ್ ಕೌರ್, ಇದೀಗ ಮದುವೆ ವಿಚಾರ ಪ್ರಸ್ತಾಪಿಸಿದ ವೇಳೆ ಸರ್ದಾರ್ ಸಿಂಗ್ ಅದಕ್ಕೆ ನಿರಾಕರಿಸಿದ್ದಾರಲ್ಲದೇ ತಾವು ಸಂಪರ್ಕಿಸಲು ಯತ್ನಿಸಿದರೂ ತಪ್ಪಿಸಿಕೊಳ್ಳುತ್ತಿದ್ದಾರೆಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...