alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಿ ನೋವಿಗೆ ಬಜ್ಜಿಯ ತಮಾಷೆ ಟ್ವೀಟ್

ಕ್ರಿಕೆಟರ್ ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಈ ವರ್ಷದ ಐಪಿಎಲ್ ಖುಷಿ ನೀಡಲಿಲ್ಲ. ಯುವರಾಜ್ ಐಪಿಎಲ್ ನಲ್ಲಿ ಅಬ್ಬರಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆಂಬ ನಿರೀಕ್ಷೆಯಿತ್ತು. ಆದ್ರೆ ಐಪಿಎಲ್ ನಲ್ಲಿ ಯುವರಾಜ್ ಪ್ರದರ್ಶನ ಕೆಟ್ಟದಾಗಿತ್ತೆಂದ್ರೆ ತಪ್ಪಾಗಲಾರದು. ಇನ್ನು ಯುವಿ ಸ್ನೇಹಿತ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಐಪಿಎಲ್ ನಲ್ಲಿ ಅಷ್ಟು ಮಿಂಚಲಿಲ್ಲ.

ಯುವಿಗೆ ಹೋಲಿಸಿದ್ರೆ ಬಜ್ಜಿ ಪ್ರದರ್ಶನ ಉತ್ತಮವಾಗಿತ್ತು. ಮೈದಾನದ ಹೊರಗೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿರುವ ಬಜ್ಜಿ ಹಾಗೂ ಯುವಿ ನಾವಿಬ್ಬರು ಒಳ್ಳೆ ಸ್ನೇಹಿತರು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಪರಸ್ಪರ ಕಾಲೆಳೆದುಕೊಂಡು ಇಬ್ಬರೂ ಸುದ್ದಿಗೆ ಬರ್ತಾರೆ.

ಈಗ ಮತ್ತೆ ಯುವಿ-ಬಜ್ಜಿ ಸುದ್ದಿಗೆ ಬಂದಿದ್ದಾರೆ. ಸೋಮವಾರ ಯುವರಾಜ್ ಕರೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದರು. ಬಾಂದ್ರಾದಲ್ಲಿ ಸುಮಾರು ಒಂದು ಗಂಟೆಯಿಂದ ಕರೆಂಟ್ ಇಲ್ಲ. ಯಾವಾಗ ಬರುತ್ತೆ ಗೊತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಹರ್ಭಜನ್ ಸಿಂಗ್ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ ಸಮಯಕ್ಕೆ ಸರಿಯಾಗಿ ಬಿಲ್ ತುಂಬಿ ಎಂದು ಬಜ್ಜಿ ಟ್ವಿಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...