alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕ್ರಿಕೆಟಿಗರ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಕ್ರಿಕೆಟ್ ಭಾರತೀಯರ ಫೇವರಿಟ್ ಗೇಮ್. ಅಭಿಮಾನಿಗಳ ಪಾಲಿಗೆ ಕ್ರಿಕೆಟಿಗರೇ ಹೀರೋ. ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿಯೋ ಆಸಕ್ತಿ, ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಹಾಗಿದ್ರೆ ನಿಮ್ಮ ಫೇವರಿಟ್ ಕ್ರಿಕೆಟರ್ ಗಳ ಶೈಕ್ಷಣಿಕ ಅರ್ಹತೆ ಏನು ಅನ್ನೋದನ್ನ ನೋಡೋಣ.

ವಿರಾಟ್ ಕೊಹ್ಲಿ : ಕ್ರಿಕೆಟ್ ದುನಿಯಾದ ಹೊಸ ಟ್ರೆಂಡ್ ಸೆಟ್ಟರ್ ವಿರಾಟ್ ಕೊಹ್ಲಿ ಉನ್ನತ ಶಿಕ್ಷಣವನ್ನೇನೂ ಪಡೆದಿಲ್ಲ. ನವದೆಹಲಿಯ ವಿಶಾಲ್ ಭಾರ್ತಿ ಪಬ್ಲಿಕ್ ಸ್ಕೂಲ್ ನಲ್ಲಿ 12ನೇ ತರಗತಿ ಪಾಸ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ : 11 ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಆರಂಭಿಸಿದ್ದ ಸಚಿನ್, ಓದಿನ ಕಡೆಗೆ ಹೆಚ್ಚು ಗಮನಹರಿಸಿರಲಿಲ್ಲ. ಸಚಿನ್ ಕೂಡ 12ನೇ ತರಗತಿ ಮುಗಿಸಿದ್ದಾರೆ.

ರಾಹುಲ್ ದ್ರಾವಿಡ್ : ಮಿಸ್ಟರ್ ಡಿಪೆಂಡೇಬಲ್ ರಾಹುಲ್ ದ್ರಾವಿಡ್, ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ : ಸ್ಟೈಲಿಶ್ ಆಟಗಾರ ಧೋನಿ ಬಿ.ಕಾಂ ಪದವೀಧರರು.

ಯುವರಾಜ್ ಸಿಂಗ್ : ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಓದಿನಲ್ಲಿ ಅಷ್ಟಕ್ಕಷ್ಟೆ. D.A.V. School ನಲ್ಲಿ 12 ನೇ ತರಗತಿ ಮುಗಿಸಿದ್ದಾರೆ.

ಶಿಖರ್ ಧವನ್ : ಟೀಂ ಇಂಡಿಯಾದ ಗಬ್ಬರ್ ಅಂತಾನೇ ಖ್ಯಾತಿ ಪಡೆದಿರೋ ಶಿಖರ್ ಧವನ್ ಸಹ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವೀರೇಂದ್ರ ಸೆಹ್ವಾಗ್ : ಹೊಡಿಬಡಿ ದಾಂಢಿಗ ವೀರೂ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.

ಅನಿಲ್ ಕುಂಬ್ಳೆ : ಬೆಂಗಳೂರಲ್ಲೇ ಹುಟ್ಟಿ ಬೆಳೆದ ಕುಂಬ್ಳೆ ಮೆಕ್ಯಾನಿಕಲ್ ಎಂಜಿನಿಯರ್. ಆರ್.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಜಹೀರ್ ಖಾನ್ : ಜಹೀರ್ ಬುದ್ಧಿವಂತ ವಿದ್ಯಾರ್ಥಿಯಾಗಿದ್ರು. ಎಂಜಿನಿಯರಿಂಗ್ ಓದುತ್ತಿದ್ದಾಗ್ಲೇ ಕ್ರಿಕೆಟ್ ನಲ್ಲಿ ಒಳ್ಳೆ ಅವಕಾಶ ಸಿಕ್ಕಿದ್ದರಿಂದ ಶಿಕ್ಷಣ ಅರ್ಧಕ್ಕೇ ಮೊಟಕುಗೊಂಡಿತ್ತು.

ವಿವಿಎಸ್ ಲಕ್ಷಣ್ : ಡಾಕ್ಟರ್ ಆಗಬೇಕು ಎಂದುಕೊಂಡಿದ್ದ ಲಕ್ಷ್ಮಣ್ ಕ್ರಿಕೆಟರ್ ಆದ್ರು. ಕ್ರಿಕೆಟ್ ಗಾಗಿ ಎಂಬಿಬಿಎಸ್ ಓದ್ತಿದ್ದ ಲಕ್ಷ್ಮಣ್ ಕಾಲೇಜು ಬಿಟ್ಟಿದ್ದರು.

ಗೌತಮ್ ಗಂಭೀರ್ : ದೆಹಲಿ ಯೂನಿವರ್ಸಿಟಿಯ ಹಿಂದು ಕಾಲೇಜಿನಲ್ಲಿ ಗೌತಮ್ ಗಂಭೀರ್ ಪದವಿ ಪಡೆದಿದ್ದಾರೆ.

ಸೌರವ್ ಗಂಗೂಲಿ : ಟೀಂ ಇಂಡಿಯಾದ ದಾದಾ ಎನಿಸಿಕೊಂಡಿದ್ದ ಗಂಗೂಲಿ, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...