alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ಉಡುಗೊರೆ ತಿರಸ್ಕರಿಸಿದ್ದಾರೆ ಕರ್ನಾಟಕದ ಈ ಕ್ರಿಕೆಟರ್

26gayakwad

ಕರ್ನಾಟಕದ ಹೆಮ್ಮೆಯ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ರಾಜ್ಯ ಸರ್ಕಾರದ ಉಡುಗೊರೆಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಬಾರಿ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ವನಿತೆಯರ ತಂಡದಲ್ಲಿ ರಾಜೇಶ್ವರಿ ಗಾಯಕ್ವಾಡ್ ಕೂಡ ಇದ್ರು.

ರಾಜ್ಯಕ್ಕೆ ಹೆಮ್ಮೆ ತಂದ ಕ್ರಿಕೆಟ್ ಆಟಗಾರ್ತಿಗೆ ಕಾರನ್ನು ಉಡುಗೊರೆಯಾಗಿ  ಕೊಡುವುದಾಗಿ ಸರ್ಕಾರ ಹೇಳಿತ್ತು. ರಾಜೇಶ್ವರಿ ಗಾಯಕ್ವಾಡ್ ಅವರಿಗೆ 5 ಲಕ್ಷ ಮೌಲ್ಯದ ಕಾರನ್ನು ಕೊಡುವುದಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಘೋಷಣೆ ಮಾಡಿದ್ದರು.

ಆದ್ರೆ ರಾಜೇಶ್ವರಿ ಈ ಉಡುಗೊರೆಯನ್ನು ನಿರಾಕರಿಸಿದ್ದಾರೆ. ಸದ್ಯಕ್ಕೆ ನಮ್ಮ ಕುಟುಂಬಕ್ಕೆ ವಾಸಿಸಲು ಸೂರು ಬೇಕು. ಸ್ವಂತದ್ದೊಂದು ಮನೆಯ ಅಗತ್ಯ ತುಂಬಾನೇ ಇದೆ ಅಂತಾ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಆಟೋಮೊಬೈಲ್ ಶೋ ರೂಂ ಒಂದು ರಾಜೇಶ್ವರಿಗೆ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...