alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾದ ಆಕರ್ಷಕ ಬ್ಯಾಟ್ಸ್ ಮೆನ್ ಗೆ ನಡೀತು ಶಸ್ತ್ರಚಿಕಿತ್ಸೆ

ಮಂಡಿಭಾಗದ ಸ್ನಾಯುವಿಗೆ ಗಾಯ ಮಾಡಿಕೊಂಡಿರುವ ಕ್ರಿಕೆಟರ್ ಕೇದಾರ್ ಜಾದವ್ ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡಿ ಶೀಘ್ರದಲ್ಲಿಯೇ ಟೀಂ ಇಂಡಿಯಾಕ್ಕೆ ವಾಪಸ್ ಆಗ್ತೇನೆಂದು ಕೇದಾರ್ ಜಾದವ್ ಹೇಳಿದ್ದಾರೆ.

ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಕೇದಾರ್ ಜಾದವ್ ಏಪ್ರಿಲ್ ಏಳರಂದು ಮುಂಬೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿಯೇ ಗಾಯ ಮಾಡಿಕೊಂಡಿದ್ದರು. ಹಾಗಾಗಿ ಕೇದಾರ್ ಜಾದವ್ ಉಳಿದ ಪಂದ್ಯಗಳಲ್ಲಿ ಮೈದಾನಕ್ಕಿಳಿಯಲಿಲ್ಲ. ಕಳೆದ ಎರಡು ತಿಂಗಳಿಂದ ಮೈದಾನದಿಂದ ಹೊರಗಿರುವ ಕೇದಾರ್ ಜಾದವ್ ಆದಷ್ಟು ಬೇಗ ತಂಡಕ್ಕೆ ಮರಳಲಿದ್ದಾರೆ.

ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ಕೇದಾರ್ ಜಾದವ್ ಸ್ಥಾನ ಪಡೆಯಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟಿ-20 ಪಂದ್ಯದ ಮೇಲೆ ಕೇದಾರ್ ಜಾದವ್ ಕಣ್ಣಿಟ್ಟಿದ್ದಾರೆ. ಗಾಯದ ಹೊರತಾಗಿಯೂ ಜಾದವ್ ಜೂನ್ 15 ರಂದು ನಡೆದ ಯೋ ಯೋ ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದರು.

ಶಸ್ತ್ರಚಿಕಿತ್ಸೆ ನಂತ್ರ ಟ್ವಿಟ್ ಮಾಡಲು ನಾನು ಹಿಂಜರಿದಿದ್ದೆ. ಆದ್ರೆ ನೀವೇ ಶಕ್ತಿ, ನೀವೇ ಪ್ರೇರಣೆ ಎಂಬುದು ಈಗ ಅರಿವಾಗಿದೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡಿ ಶೀಘ್ರ ತಂಡಕ್ಕೆ ವಾಪಸ್ ಬರ್ತೇನೆ ಎಂದು ಜಾದವ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...