alex Certify
ಕನ್ನಡ ದುನಿಯಾ       Mobile App
       

Kannada Duniya

ಒಟ್ಟಾಗಿ ಈ ಸಿನಿಮಾ ನೋಡಲಿದೆ ಟೀಂ ಇಂಡಿಯಾ ತಂಡ

download-1

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನ ಚರಿತ್ರೆ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಮೇ 26ರಂದು ತೆರೆಗೆ ಬರಲಿದೆ. ಟೀಂ ಇಂಡಿಯಾದ ಮಾಸ್ಟರ್ ಸಚಿನ್ ಜೀವನ ಚರಿತ್ರೆಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರಿಗೆ ಚಿತ್ರವನ್ನು ಒಟ್ಟಿಗೆ ನೋಡುವ ಅವಕಾಶ ಸಿಕ್ಕಿದೆ.

ಬುಧವಾರ ಮುಂಬೈನ ವೆರ್ಸೋವಾ ಥಿಯೇಟರ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ರವಿ ಸ್ಪಷ್ಟಪಡಿಸಿದ್ದಾರೆ. ಟೀಂ ಇಂಡಿಯಾದ ಎಲ್ಲ ಆಟಗಾರರು ಚಿತ್ರ ವೀಕ್ಷಣೆಗೆ ಆಗಮಿಸುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದಷ್ಟೇ ಸಚಿನ್ ಭಾರತೀಯ ಸೈನಿಕರಿಗೆ ಚಿತ್ರ ತೋರಿಸಿದ್ದರು. ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರ ಸಚಿನ್ ಜೀವನ ಚರಿತ್ರೆಯಾಗಿದೆ. 24 ವರ್ಷಗಳ ಕಾಲ ವೃತ್ತಿ ಬದುಕಿನಲ್ಲಿ ದಾಖಲೆಗಳ ಸುರಿಮಳೆಗೈದ ಸಚಿನ್ ಖಾಸಗಿ ಬದುಕಿನ ಏರುಪೇರುಗಳನ್ನೂ ತೆರೆ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...