alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ಐದು ವರ್ಷದಲ್ಲಿ ಇಷ್ಟೊಂದು ಸವಾಲು ಎದುರಿಸಲಿದೆ ಟೀಂ ಇಂಡಿಯಾ

ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಟೀಂ ಇಂಡಿಯಾ ಮುಂದಿನ ಐದು ವರ್ಷದಲ್ಲಿ 203 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. 2018-2023 ರ ಐದು ವರ್ಷಗಳ ಪ್ರವಾಸ ಕಾರ್ಯಕ್ರಮದಲ್ಲಿ ಭಾರತ ತಂಡ 51 ಟೆಸ್ಟ್, 83 ಏಕದಿನ ಪಂದ್ಯ ಹಾಗೂ 69 ಟಿ-20 ಪಂದ್ಯಗಳನ್ನು ಆಡಲಿದೆ.

ಬೇರೆ ದೇಶಗಳಿಗೆ ಹೋಲಿಸಿದ್ರೆ ಐದು ವರ್ಷಗಳಲ್ಲಿ ಭಾರತ ಅತಿ ಹೆಚ್ಚು ಪಂದ್ಯಗಳನ್ನಾಡಲಿದೆ. ವೆಸ್ಟ್ ಇಂಡೀಸ್ ಮುಂದಿನ ಐದು ವರ್ಷಗಳಲ್ಲಿ 186 ಪಂದ್ಯಗಳನ್ನಾಡಿದ್ರೆ, ಇಂಗ್ಲೆಂಡ್ 175 ಪಂದ್ಯಗಳನ್ನು ಎದುರಿಸಲಿದೆ. ಟೆಸ್ಟ್ ವಿಚಾರಕ್ಕೆ ಬಂದ್ರೆ ಭಾರತ ಎರಡನೇ ಸ್ಥಾನದಲ್ಲಿದೆ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ 59 ಟೆಸ್ಟ್ ಪಂದ್ಯಗಳನ್ನಾಡುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ 47 ಟೆಸ್ಟ್ ಪಂದ್ಯಗಳನ್ನಾಡಲಿದೆ. ಏಕದಿನ ಹಾಗೂ ಟಿ-20 ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ಗಿಂತ ಮುಂದಿದೆ. ವೆಸ್ಟ್ ಇಂಡೀಸ್ 75 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಲಿದೆ.

2018-2019 ರ ಅವಧಿಯಲ್ಲಿ ಟೀಂ ಇಂಡಿಯಾ 54 ಪಂದ್ಯಗಳನ್ನಾಡಲಿದೆ. ನಂತ್ರ ಪ್ರತಿ ವರ್ಷ 41, 33, 40 ಹಾಗೂ 35 ಪಂದ್ಯಗಳನ್ನಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...