alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಆಟಗಾರರ ಜೊತೆ ಭಜ್ಜಿ ಪತ್ನಿಯ ಭರ್ಜರಿ ಬರ್ತ್ ಡೇ

geeta-basara-birthday

ಭಾರತ ತಂಡದ ಆಟಗಾರ ಹರ್ಭಜನ್ ಸಿಂಗ್ ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಗೀತಾ ಬಸ್ರಾರೊಂದಿಗೆ ವಿವಾಹವಾಗಿದ್ದರು. ಮದುವೆಯಾದ ಬಳಿಕ ಬಂದಿರುವ ಮೊದಲ ಹುಟ್ಟುಹಬ್ಬವನ್ನು ಗೀತಾ ಬಸ್ರಾ ಟೀಂ ಇಂಡಿಯಾ ಆಟಗಾರರ ಜೊತೆ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.

ಹರ್ಭಜನ್ ಸಿಂಗ್, ಪತ್ನಿಗಾಗಿ ಬರ್ತ್ ಡೇ ಆಚರಣೆಯ ವ್ಯವಸ್ಥೆಯನ್ನು ಮಾಡಿದ್ದು, ಸ್ವತಃ ಗೀತಾ ಅವರಿಗೂ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲವೆನ್ನಲಾಗಿದೆ. ಭಾರತೀಯ ಆಟಗಾರರ ಡ್ರೆಸ್ಸಿಂಗ್ ರೂಮಿನಲ್ಲಿ ನಡೆದ ಬರ್ತ್ ಡೇ ಆಚರಣೆ ವೇಳೆ ಕೇಕ್ ಕಟ್ ಮಾಡಿದ ಗೀತಾ, ಪತಿ ಹರ್ಭಜನ್ ಅವರಿಗೆ ಕೇಕ್ ತಿನ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಬಹುತೇಕ ಎಲ್ಲ ಆಟಗಾರರೂ ಹಾಜರಿದ್ದು, ಗೀತಾ ಬಸ್ರಾರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ತಮ್ಮ ಬಹು ಕಾಲದ ಗೆಳತಿ, ಬಾಲಿವುಡ್ ನಟಿ ಗೀತಾ ಬಸ್ರಾರನ್ನು ಹರ್ಭಜನ್ ಸಿಂಗ್ 2015 ರ ಅಕ್ಟೋಬರ್ ನಲ್ಲಿ ವಿವಾಹವಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...