alex Certify
ಕನ್ನಡ ದುನಿಯಾ       Mobile App
       

Kannada Duniya

BCCI ಗೆ ಕ್ಲಾಸ್ ತೆಗೆದುಕೊಂಡ ಕುಂಬ್ಳೆ ಫ್ಯಾನ್ಸ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಲು ಹೋಗಿ ಬಿ.ಸಿ.ಸಿ.ಐ. ಯಡವಟ್ಟು ಮಾಡಿದೆ.

ಕ್ರೀಡಾಭಿಮಾನಿಗಳಿಂದ ಆಕ್ರೋಶ ವ್ಯಕ್ತವಾದ ಬಳಿಕ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ಪೇಚಿಗೆ ಸಿಲುಕಿದೆ. ಅನಿಲ್ ಕುಂಬ್ಳೆ ಅವರು 47 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರಿಗೆ ಅಭಿಮಾನಿಗಳು, ಹಿತೈಷಿಗಳು ಶುಭಾಶಯ ಹೇಳಿದ್ದಾರೆ.

ಬಿ.ಸಿ.ಸಿ.ಐ. ಟ್ವಿಟರ್ ನಲ್ಲಿ ಕೇವಲ ‘ಮಾಜಿ ಬೌಲರ್ ಅನಿಲ್ ಕುಂಬ್ಳೆಗೆ ಶುಭಾಶಯ’ ಎಂದಷ್ಟೇ ವಿಶ್ ಮಾಡಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಅನಿಲ್ ಕುಂಬ್ಳೆ ಮಾಜಿ ಬೌಲರ್ ಅಷ್ಟೇ ಅಲ್ಲ, ಶ್ರೇಷ್ಠ ಸ್ಪಿನ್ನರ್. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಮಾಜಿ ಮುಖ್ಯ ತರಬೇತುದಾರ. 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ ಪಡೆದಿರುವ ಅವರು ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಹೀಗೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನಂತರ ಬಿ.ಸಿ.ಸಿ.ಐ. ಹಳೆಯ ಟ್ವೀಟ್ ಡಿಲಿಟ್ ಮಾಡಿ, ಮತ್ತೊಂದು ಟ್ವೀಟ್ ಮಾಡಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕುಂಬ್ಳೆಗೆ ಶುಭಾಶಯಗಳು ಎಂದು ಹೇಳಿದೆ. 17 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಕುಂಬ್ಳೆಗೆ ಬಿ.ಸಿ.ಸಿ.ಐ. ಸರಿಯಾಗಿ ವಿಶ್ ಮಾಡಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಂಬ್ಳೆ ಮಾತ್ರ ಬಿ.ಸಿ.ಸಿ.ಐ.ಗೆ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...