alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನು ಅಪ್ಪಿಕೊಂಡ ಕೋಚ್ ಗೆ ಹೀಗಾಯ್ತು….

ನವದೆಹಲಿ: ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಭಾರತೀಯ ಆರ್ಚರಿ(ಬಿಲ್ಲುಗಾರಿಕೆ) ತಂಡದ ಕೋಚ್ ಸುನಿಲ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಅರ್ಜೈಂಟೈನಾದಲ್ಲಿ ನಡೆದ ವಿಶ್ವ ಯುವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ತಂಡದೊಂದಿಗೆ ಸುನಿಲ್ ಕುಮಾರ್ ತೆರಳಿದ್ದರು.

ಅರ್ಜೈಂಟೈನಾದಲ್ಲಿ ಪ್ರಾಕ್ಟೀಸ್ ಮಾಡುವ ಸಂದರ್ಭದಲ್ಲಿ ಗ್ರೇಟ್ ಬ್ರಿಟನ್ ತಂಡದ ಹುಡುಗಿಯನ್ನು ಅಪ್ಪಿಕೊಂಡಿದ್ದು, ಅನುಚಿತ ವರ್ತನೆ ಕಾರಣಕ್ಕೆ ಅವರ ಮೇಲೆ ಅಜೀವ ನಿಷೇಧ ಹೇರಲಾಗಿದೆ.

ಸುನಿಲ್ ಕುಮಾರ್ ಅನುಚಿತ ವರ್ತನೆ ತೋರಿದ ಕುರಿತಾಗಿ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತನಿಖೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಅವರು ತಪ್ಪು ಮಾಡಿರುವುದು ಕಂಡು ಬಂದ ಕಾರಣ ನಿಷೇಧ ಹೇರಲಾಗಿದೆ ಎಂದು ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ ಹಿರಿಯ ಅಧಿಕಾರಿ ವೀರೇಂದ್ರ ಸಚ್ ದೇವ್ ತಿಳಿಸಿದ್ದಾರೆ. ಸುನಿಲ್ ಕುಮಾರ್ ಅವರ ಸ್ಥಾನಕ್ಕೆ ಹೊಸ ಕೋಚ್ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...