alex Certify
ಕನ್ನಡ ದುನಿಯಾ       Mobile App
       

Kannada Duniya

ವೆಸ್ಟ್ ಇಂಡೀಸ್ ಕ್ಲೀನ್ ಸ್ವಿಪ್: ಸರಣಿ ಜಯ ದಾಖಲಿಸಿದ ಇಂಡಿಯಾ

ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ (92) ಹಾಗೂ ಯುವ ಆಟಗಾರ ರಿಶಬ್ ಪಂತ್ (58) ಅತ್ಯುತ್ತಮ ಆಟದಿಂದಾಗಿ ಟೀಂ ಇಂಡಿಯಾ ವೆಸ್ಟ್ ಇಂಡೀಸನ್ನು ಕ್ಲೀನ್ ಸ್ವಿಪ್ ಮಾಡಿದೆ.

ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದ ಟೀಂ ಇಂಡಿಯಾ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್ ಇಂಡೀಸ್ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. ಗುರಿ ಬೆನ್ನು ಹತ್ತಿದ ಭಾರತ 4 ವಿಕೆಟ್ ಗೆ 182 ರನ್ ಗಳಿಸಿ ಜಯ ಸಾಧಿಸಿದೆ.

ಶಿಖರ್ ಧವನ್ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ. 62 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸ್ ಸಿಡಿಸಿದ್ದಾರೆ. ಪಂತ್ 38 ಎಸೆತಕ್ಕೆ 5 ಬೌಂಡರಿ ಹಾಗೂ 3 ಸಿಕ್ಸ್ ಬಾರಿಸಿದ್ರು. ಆರಂಭಿಕ ಜೋಡಿ  130 ರನ್ ಗಳ ಜೊತೆಯಾಟವಾಡ್ತು. ರಿಶಬ್ ತಮ್ಮ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಮೊದಲ ಅರ್ಧಶತಕ ಸಿಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...