alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ದಾಖಲೆ ಮುರಿಯಲಿದ್ದಾರಾ ರೋಹಿತ್ ಶರ್ಮಾ…?

ವೆಸ್ಟ್ ಇಂಡೀಸ್ ವಿರುದ್ಧ ಲಕ್ನೋದಲ್ಲಿ ಭಾರತ ಎರಡನೇ ಟಿ-20 ಪಂದ್ಯವನ್ನಾಡಲಿದೆ. ರಾತ್ರಿ 7 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳು ಸೆಣೆಸಾಟ ನಡೆಸಲಿವೆ. ಇದೇ ಮೊದಲ ಬಾರಿಗೆ ವಾಜಪೇಯಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಪಂದ್ಯ ಗೆಲುವೊಂದೇ ಅಲ್ಲ ಸರಣಿ ಕೈವಶ ಮಾಡಿಕೊಳ್ಳುವುದು ಟೀಂ ಇಂಡಿಯಾ ಗುರಿಯಾಗಿದೆ.

ನವೆಂಬರ್ 6ರಂದು ಬೆಳಿಗ್ಗೆ ಮೈದಾನಕ್ಕೆ ಮರು ನಾಮಕರಣ ಮಾಡಿ ಉದ್ಘಾಟನೆ ಸಮಾರಂಭ ನೆರವೇರಿದೆ. ಅಂತರಾಷ್ಟ್ರೀಯ ಟಿ-20 ಪಂದ್ಯ ನಡೆದ ಭಾರತದ 22ನೇ ಮೈದಾನವಾಗಲಿದೆ ಇದು. ಜೊತೆಗೆ ಭಾರತದ 52ನೇ ಅಂತರಾಷ್ಟ್ರೀಯ ಕ್ರೀಡಾಂಗಣವಾಗಲಿದೆ.

ಇನ್ನು ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆಯುವ ಸಾಧ್ಯತೆಯಿದೆ. ಹಿಂದಿನ ಪಂದ್ಯದಲ್ಲಿ ಶರ್ಮಾ 6 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 11 ರನ್ ಗಳಿಸಿದ್ರೆ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಲಿದ್ದಾರೆ. ಸದ್ಯ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 62 ನೇ ಟಿ-20 ಪಂದ್ಯದಲ್ಲಿ 2102 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 85 ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ 2092 ರನ್ ಗಳಿಸಿದ್ದಾರೆ.

ಒಂದು ವೇಳೆ ಮಂಗಳವಾರ ಭಾರತ ಟಿ-20 ಪಂದ್ಯ ಗೆದ್ದರೆ ಸತತ 7 ಟಿ-20 ಸರಣಿಯನ್ನು ಕೈವಶ ಮಾಡಿಕೊಂಡಂತಾಗುತ್ತದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. ಪಾಕಿಸ್ತಾನ ಸತತ 11 ಸರಣಿ ಕೈವಶ ಮಾಡಿಕೊಂಡಿದೆ.

ಶಿಖರ್ ಧವನ್ ಮೊದಲ ಟಿ-20 ಪಂದ್ಯದಲ್ಲಿ 3 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ 20 ರನ್ ಗಳಿಸಿದ್ರೆ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಧವನ್ ಸ್ಕೋರ್ 1000 ಆಗಲಿದೆ. ಧವನ್ 41 ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಈವರೆಗೆ 980 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ 1000 ರನ್ ಗಳಿಸಿದ ಆರನೇ ಭಾರತೀಯನಾಗಲಿದ್ದಾರೆ ಧವನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...