alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆಗೆ ಅಗೌರವ ತೋರಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಕೋಲ್ಕತ್ತಾದಲ್ಲಿ ಭಾರತ-ಶ್ರೀಲಂಕಾ ಮಧ್ಯೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮ್ಯಾಚ್ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯ್ತು. ಈ ವೇಳೆ ಕೊಹ್ಲಿ ಚೂಯಿಂಗ್ ಗಮ್ ಅಗಿಯುತ್ತಿದ್ರು.

ಈಡನ್ ಗಾರ್ಡನ್ ಅಂಗಳದಲ್ಲಿ ಉಭಯ ತಂಡಗಳ ಎಲ್ಲಾ ಆಟಗಾರರು ರಾಷ್ಟ್ರಗೀತೆಗೆ ಗೌರವ ತೋರಿಸಿದ್ರೆ, ಕೊಹ್ಲಿ ಮಾತ್ರ ಅಶಿಸ್ತಿನಿಂದ ವರ್ತಿಸಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಕ್ರಿಕೆಟ್ ನಲ್ಲಿ ಇಂತಹ ವಿವಾದ ಹೊಸದೇನೂ ಅಲ್ಲ.

ಕಳೆದ ಜನವರಿಯಲ್ಲಿ ಪರ್ವೇಜ್ ರಸೂಲ್ ಕೂಡ ಇಂಥದ್ದೇ ವಿವಾದದಲ್ಲಿ ಸಿಲುಕಿದ್ದರು. ಇಂಗ್ಲೆಂಡ್ ವಿರುದ್ಧದ ಟಿ-20 ಪಂದ್ಯಕ್ಕೂ ಮುನ್ನ ಭಾರತ ರಾಷ್ಟ್ರಗೀತೆ ಪ್ರಸಾರವಾಗುತ್ತಿತ್ತು. ಈ ವೇಳೆ ರಸೂಲ್ ಕೂಡ ಚೂಯಿಂಗ್ ಗಮ್ ಅಗಿಯುತ್ತಿದ್ದರು. ತಂಡದ ನಾಯಕನ ಸ್ಥಾನದಲ್ಲಿರುವ ಕೊಹ್ಲಿಯ ಈ ವರ್ತನೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...