alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೊಂದು ಸುದ್ದಿ! ‘ವಿರಾಟ್ –ಅನುಷ್ಕಾ ಮದುವೆ ಕ್ಯಾನ್ಸಲ್’

ಇಟಲಿಯಲ್ಲಿ ನಡೆಯಬೇಕಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ವಿವಾಹ ರದ್ದಾಗಿದೆ. ಇಂತಹುದೊಂದು ಜೋಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರವಾಸಿ ಶ್ರೀಲಂಕಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ ಆದ ನಂತರದಲ್ಲಿ ಯಶಸ್ವಿಯಾಗಿ ಮುನ್ನಡೆದಿದ್ದ ಟೀಂ ಇಂಡಿಯಾ, ಕೊಹ್ಲಿ ಮದುವೆ ಕಾರಣದಿಂದ ತಂಡದಿಂದ ಹೊರಗುಳಿದಿರುವುದರಿಂದ ಹಿನ್ನಡೆ ಅನುಭವಿಸಿದೆ.

ಕೊಹ್ಲಿ ಇಲ್ಲದ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದು, ಮೊದಲ ಪಂದ್ಯದಲ್ಲೇ ಮಕಾಡೆ ಮಲಗಿದೆ. ಇದಕ್ಕೆ ಟ್ವಿಟರ್ ನಲ್ಲಿ ಹಾಸ್ಯ ಮಾಡಲಾಗಿದೆ. ತಂಡವನ್ನು ಮುನ್ನಡೆಸಲು ಕೊಹ್ಲಿ ಮದುವೆ ಕ್ಯಾನ್ಸಲ್ ಮಾಡಬೇಕೆ ಎಂದು ಪ್ರಶ್ನಿಸಲಾಗಿದೆ.

ಧರ್ಮಶಾಲಾದ ಪಂದ್ಯದಲ್ಲಿ ಭಾರತ ತಂಡ ಸೋತ ಸುದ್ದಿ ತಿಳಿದ ಕೊಹ್ಲಿ, ಮದುವೆ ರದ್ದುಪಡಿಸಿ ತಂಡವನ್ನು ಸೇರಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಟ್ವಿಟಾರ್ಥಿಗಳು ವ್ಯಂಗ್ಯವಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...