alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ ಧವನ್, ಕಾರಣ ಗೊತ್ತಾ?

shikhar-dhawan-twitter_806x605_41503029900

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಿಖರ್ ಧವನ್ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದಿದ್ದಾರೆ. ಇದರ ಜೊತೆಜೊತೆಗೆ ಟ್ವಿಟ್ಟರ್ ನಲ್ಲಿ 1 ಮಿಲಿಯನ್ ಫಾಲೋವರ್ಗಳನ್ನೂ ಸಂಪಾದಿಸಿದ್ದಾರೆ. ಈ ಖುಷಿಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿರೋ ಧವನ್, ಇನ್ನಷ್ಟು ಪರಿಶ್ರಮಪಡುವುದಾಗಿ ಭರವಸೆ ನೀಡಿದ್ದಾರೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಧವನ್ ಇದೇ ಮೊದಲ ಬಾರಿಗೆ 28ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ 10 ಸ್ಥಾನಗಳ ಭಡ್ತಿಯನ್ನೂ ಪಡೆದಿದ್ದಾರೆ. ಲಂಕಾ ವಿರುದ್ಧದ ಕೊನೆಯ ಟೆಸ್ಟ್ ನಲ್ಲಿ ಧವನ್ ಶತಕ ಬಾರಿಸಿದ್ದು ವಿಶೇಷ. ಗಾಯದ ಸಮಸ್ಯೆಯಿಂದ ಮುರಳಿ ವಿಜಯ್ ರನ್ನು ಕೈಬಿಡಲಾಗಿತ್ತು.

ಹಾಗಾಗಿ ಧವನ್ ಗೆ ಲಂಕಾ ವಿರುದ್ಧ ಆಡುವ ಚಾನ್ಸ್ ದೊರೆತಿತ್ತು. ಈ ಅವಕಾಶವನ್ನು ಧವನ್ ಸದುಪಯೋಗಪಡಿಸಿಕೊಂಡಿದ್ದಾರೆ. ಮೂರು ಟೆಸ್ಟ್ ಗಳಲ್ಲಿ 2 ಶತಕಗಳೊಂದಿಗೆ 358 ರನ್ ಬಾರಿಸುವ ಮೂಲಕ ತಾವೊಬ್ಬ ಉತ್ತಮ ಟೆಸ್ಟ್ ಆಟಗಾರನೂ ಹೌದು ಅನ್ನೋದನ್ನು ಸಾಬೀತು ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...