alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳನ್ನು ದಂಗಾಗಿಸಿದೆ ಜಸ್ಪ್ರೀತ್ ಬುಮ್ರಾ ಹೊಸ ಅವತಾರ

ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರ ಹೊಸ ಅವತಾರ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ತಮ್ಮ ಫಿಟ್ & ಫೈನ್ ಬಾಡಿಯನ್ನು ಬುಮ್ರಾ ಸೆಲ್ಫಿಯಲ್ಲಿ ಪ್ರದರ್ಶಿಸಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್ ಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಫಿಟ್ ಆಗಿರಲು ಬದ್ಧತೆ ಬೇಕು ಅಂತಾನೂ ಬರೆದುಕೊಂಡಿದ್ದಾರೆ. ಟೀಂ ಇಂಡಿಯಾದ ಟ್ರೈನರ್ ಶಂಕರ್ ಬಸು ಇತ್ತೀಚೆಗಷ್ಟೆ ತಂಡಕ್ಕೆ ಮರಳಿದ್ದರು. ಅದರ ಬೆನ್ನಲ್ಲೇ ಆಟಗಾರರ ಫಿಟ್ನೆಸ್ ಕಡೆಗೆ ಸಂಪೂರ್ಣ ಗಮನಹರಿಸಿದ್ದಾರೆ. ಶಂಕರ್ ಗರಡಿಯಲ್ಲಿ ಬ್ಲೂಬಾಯ್ಸ್ ಸಾಕಷ್ಟು ಕಸರತ್ತು ಮಾಡ್ತಿದ್ದಾರೆ.

2019ರ ವಿಶ್ವಕಪ್ ಗಮನದಲ್ಲಿರಿಸಿಕೊಂಡು ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸಲಾಗ್ತಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ ಆಟಗಾರರಿಗೆ ಮಾತ್ರ ತಂಡದಲ್ಲಿ ಸ್ಥಾನ ಕೊಡಲಾಗ್ತಿದೆ. ಹಾಗಾಗಿ ಬುಮ್ರಾ ಕೂಡ ತಮ್ಮ ತೆಳ್ಳನೆಯ ದೇಹವನ್ನು ಸಿಕ್ಸ್ ಪ್ಯಾಕ್ ಆಗಿ ಪರಿವರ್ತನೆ ಮಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...