alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಕಾ ವಿರುದ್ಧ ಗೆಲುವಿನ ನಂತರ ಕೊಹ್ಲಿ ಬಾಯ್ಸ್ ಮಾಡಿದ್ದೇನು?

rohit-sharma-fifa-session_806x605_61501386672

ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ 304 ರನ್ ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟೆಸ್ಟ್ ಜಯ ಸಹಜವಾಗಿಯೇ ಆಟಗಾರರಿಗೆ ಖುಷಿ ಕೊಟ್ಟಿದೆ. ಈ ಗೆಲುವಿನ ಸಂಭ್ರಮವನ್ನು ಕೂಡ ಕೊಹ್ಲಿ ಪಡೆ ವಿಶಿಷ್ಟವಾಗಿಯೇ ಆಚರಿಸಿದೆ.

ಎಲ್ಲರೂ ಜೊತೆಯಾಗಿ ಕೂತು ವಿಡಿಯೋ ಗೇಮ್ ಆಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಅಂತಾ ಸುಸ್ತಾಗಿದ್ದ ಎಲ್ರೂ ಫುಲ್ ರಿಲ್ಯಾಕ್ಸ್ ಮಾಡಿದ್ದಾರೆ. ಶಿಖರ್ ಧವನ್, ವೃದ್ಧಿಮಾನ್ ಸಹಾ, ಚೇತೇಶ್ವರ್ ಪೂಜಾರಾ ಹಾಗೂ ಇನ್ನಿಬ್ಬರು ಸಖತ್ತಾಗಿ ಹರಟೆ ಹೊಡೆದಿದ್ದಾರೆ. ಎಲ್ಲರ ಜೊತೆಗೆ ಸೆಲ್ಫಿ ತೆಗೆದುಕೊಂಡು ಈ ಫೋಟೋವನ್ನು ರೋಹಿತ್ ಶರ್ಮಾ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಆದ್ರೆ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಧವನ್, ಚೇತೇಶ್ವರ್ ಪೂಜಾರಾ ಹಾಗೂ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಲಂಕಾ ಜೊತೆಗಿನ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು. ಮ್ಯಾಚ್ ಆಡದೇ ಇದ್ರೂ ತಂಡದ ಗೆಲುವನ್ನು ಸಂಭ್ರಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...