alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ನಲ್ಲಿ ಪೂಜಾರ್ ಸಾಧನೆ

pujra1

ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ್ ಟೆಸ್ಟ್ ವೃತ್ತಿ ಜೀವನದಲ್ಲಿ 4000 ರನ್ ಪೂರ್ಣಗೊಳಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಚೇತೇಶ್ವರ್ ಪೂಜಾರ್ ಈ ಸಾಧನೆ ಮಾಡಿದ್ದಾರೆ. ಇದು ಪೂಜಾರ್ 50ನೇ ಟೆಸ್ಟ್ ಪಂದ್ಯವಾಗಿದ್ದು, ವೇಗವಾಗಿ 4 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಪೂಜಾರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

84  ಇನ್ನಿಂಗ್ಸ್ ನಲ್ಲಿ  ಪೂಜಾರ್ 4 ಸಾವಿರ ರನ್ ಪೂರ್ಣಗೊಳಿಸಿದ್ರು. ಈ ಮೂಲಕ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್  ಸಾಧನೆಗೆ ಸಮನಾಗಿ ನಿಂತಿದ್ದಾರೆ ಪೂಜಾರ್. ರಾಹುಲ್ ದ್ರಾವಿಡ್ ಕೂಡ ತಮ್ಮ 84ನೇ ಇನ್ನಿಂಗ್ಸ್ ನಲ್ಲಿ 4 ಸಾವಿರ ರನ್ ಗಳಿಸಿದ್ದರು.

ವೇಗವಾಗಿ 4 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸೆಹ್ವಾಗ್ ಮೊದಲ ಸ್ಥಾನದಲ್ಲಿದ್ದಾರೆ. ಸೆಹ್ವಾಗ್ 79 ಇನ್ನಿಂಗ್ಸ್ ನಲ್ಲಿ 4 ಸಾವಿರ ರನ್ ಗಳಿಸಿದ್ದರು. ಎರಡನೇ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ ಇದ್ದು, ಅವರು 81 ಇನ್ನಿಂಗ್ಸ್ ಗೆ 4 ಸಾವಿರ ರನ್ ಪೂರ್ಣಗೊಳಿಸಿದ್ದರು. ಪಂದ್ಯದ ರೀತಿಯಲ್ಲಿ ನೋಡಿದ್ರೆ ಸುನಿಲ್ ಗವಾಸ್ಕರ್ 43 ಪಂದ್ಯಗಳಲ್ಲಿ 4 ಸಾವಿರ ರನ್ ಗಳಿಸಿದ್ದರೆ, 48 ಪಂದ್ಯದಲ್ಲಿ ದ್ರಾವಿಡ್ ಹಾಗೂ ಸೆಹ್ವಾಗ್ ಈ ಸಾಧನೆ ಮಾಡಿದ್ದರು. ಈಗ ಪೂಜಾರ್ ತಮ್ಮ 50ನೇ ಪಂದ್ಯದಲ್ಲಿ 4 ಸಾವಿರ ರನ್ ಪೂರ್ಣಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...