alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಧೋನಿ ಕಾಲಿಗೆ ಬಿದ್ದ ಅಭಿಮಾನಿ…!

ಮೊಹಾಲಿಯಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಣ ಎರಡನೇ ಏಕದಿನ ಪಂದ್ಯ ಸಾಕಷ್ಟು ವಿಶೇಷತೆಗಳಿಗೆ ಸಾಕ್ಷಿಯಾಯ್ತು. ರೋಹಿತ್ ಶರ್ಮಾ ದಾಖಲೆಯ 3ನೇ ದ್ವಿಶತಕ ಬಾರಿಸಿದ್ರೆ, ಪತ್ನಿ ರಿತಿಕಾ ಆನಂದಭಾಷ್ಪ ಸುರಿಸಿದ್ರು. ಪಂದ್ಯವನ್ನು 141 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಮೈದಾನದಲ್ಲಿ ನಡೆದ ಇನ್ನೊಂದು ಕುತೂಹಲಕಾರಿ ಸಂಗತಿಯನ್ನು ಯಾರೂ ಹೆಚ್ಚಾಗಿ ಗಮನಿಸಲೇ ಇಲ್ಲ. ಪಂದ್ಯದ ನಡುವೆ ಮೈದಾನದೊಳಗೆ ಪ್ರವೇಶಿಸಿದ ಅಭಿಮಾನಿಯೊಬ್ಬ ಮಹೇಂದ್ರ ಸಿಂಗ್ ಧೋನಿ ಕಾಲಿಗೆ ಬಿದ್ದಿದ್ದಾನೆ. ಧೋನಿ ಅವನನ್ನು ತಡೆಯಲು ಯತ್ನಿಸಿದ್ರು. ಆದ್ರೆ ಆತ ಹಿಂದೆ ಸರಿಯಲಿಲ್ಲ, ಧೋನಿ ಕಾಲು ಮುಟ್ಟಿ ನಮಸ್ಕರಿಸಿಯೇ ಬಿಟ್ಟ.

ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಓಡಿ ಬಂದು ಅಭಿಮಾನಿಯನ್ನು ಅಲ್ಲಿಂದ ಕರೆದೊಯ್ದರು. ಧೋನಿಗೆ ಇಂತಹ ಅನುಭವವಾಗಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿ ಅಭಿಮಾನಿಗಳು ಮಾಹಿ ಕಾಲಿಗೆ ಬಿದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...