alex Certify
ಕನ್ನಡ ದುನಿಯಾ       Mobile App
       

Kannada Duniya

ರಬಾಡಾಗೆ ಮುತ್ತು ನೀಡಿದ ನಾಯಕ ಗೆಳತಿಗೆ ಕೆಂಡದಂಥಾ ಕೋಪ..!

ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ವಿರುದ್ಧ 72 ರನ್ ಗಳ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ ಮಾಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದ ವೆರ್ನೊನ್ ಫಿಲಾಂಡರ್ ಜಯದ ರೂವಾರಿ ಎನಿಸಿಕೊಂಡಿದ್ರು.

ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್ ತನ್ನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಬೌಲರ್ ರಬಾಡಾಗೆ ಡುಪ್ಲೆಸಿಸ್ ಮುತ್ತಿಡುತ್ತಿರುವ ಫೋಟೋ ಅದು.

ಈ ಫೋಟೋಗೆ ತರಹೇವಾರಿ ಕಮೆಂಟ್ ಗಳು ಬಂದಿವೆ. ಖುದ್ದು ರಬಾಡಾ ಮಾಡಿರೋ ಕಮೆಂಟ್ ನೋಡಿ ಡುಪ್ಲೆಸಿಸ್ ಶಾಕ್ ಆಗಿದ್ದಾರೆ. ಡುಪ್ಲೆಸಿಸ್ ಮುತ್ತಿಟ್ಟಿದ್ದಕ್ಕೆ ರಬಾಡಾ ಗೆಳತಿ ಸಿಟ್ಟಾಗಿದ್ದಾಳಂತೆ. ಹಾಗಂತ ರಬಾಡಾ ಫೋಟೋಗೆ ಕಮೆಂಟ್ ಹಾಕಿದ್ದಾರೆ. ನಾಳೆಯಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...