alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೆಸ್ಸಿಂಗ್ ರೂಂನಲ್ಲಿ ಎದುರಾಗಲಿದ್ದಾರೆ ಕಾರ್ತಿಕ್ -ಮುರಳಿ

ತವರಿನಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ರನ್ ಗಳಿಸಲು ಹೆಣಗಾಡ್ತಿದೆ. ಎರಡನೇ ಟೆಸ್ಟ್ ನಲ್ಲೂ ಟೀಂ ಇಂಡಿಯಾ ಸೋಲುಂಡ್ರೆ ಎಂಬ ಭಯ ಭಾರತೀಯರನ್ನು ಕಾಡಲು ಶುರುವಾಗಿದೆ. ಗೆಲುವಿನ ಗುರಿ ಬೆನ್ನುಹತ್ತಿರುವ ಕೊಹ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆ ತರ್ತಿದ್ದಾರೆ.

ಮೊದಲ ಟೆಸ್ಟ್ ನಂತ್ರ ರಿದ್ಧಿಮಾನ್ ಶಾಹ್ ಬದಲು ಪಾರ್ಥಿವ್ ಪಟೇಲ್ ಗೆ ಜಾಗ ನೀಡಿದ್ದರು. ಮೂರನೇ ಟೆಸ್ಟ್ ನಲ್ಲಿ ಪಾರ್ಥಿವ್ ಪಟೇಲ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಬರಲಿದ್ದಾರೆ. ಜನವರಿ 24ರಿಂದ ಮೂರನೇ ಟೆಸ್ಟ್ ಶುರುವಾಗಲಿದೆ. ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಬದಲಾಗಿದೆ.

ದಿನೇಶ್ ಕಾರ್ತಿಕ್ ಹಾಗೂ ಮುರಳಿ ವಿಜಯ್ ಒಂದು ಕಾಲದಲ್ಲಿ ಆಪ್ತರಾಗಿದ್ದರು. ಆದ್ರೆ ಕಾರ್ತಿಕ್ ಮೊದಲ ಪತ್ನಿ ಜೊತೆ ಮುರಳಿ ವಿಜಯ್ ಡೇಟಿಂಗ್ ಶುರುಮಾಡಿದ್ರು. ಕಾರ್ತಿಕ್ ಗೆ ವಿಚ್ಛೇದನ ನೀಡಿದ ನಂತ್ರ ನಿಕಿತಾ ಮುರಳಿ ವಿಜಯ್ ಕೈ ಹಿಡಿದಿದ್ದಾರೆ. ಇದಾದ ನಂತ್ರ ಇಬ್ಬರೂ ದೂರ ದೂರ. ಸಾರ್ವಜನಿಕವಾಗಿ ಇಬ್ಬರೂ ಈ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ. ಆದ್ರೆ ಡ್ರೆಸ್ಸಿಂಗ್ ರೂಂನಲ್ಲಿ ಇಬ್ಬರು ಎದುರು ಬದುರಾಗಲಿದ್ದಾರೆ.

ಈ ಬಗ್ಗೆ ಟ್ವೀಟರ್ ಬಳಕೆದಾರರು ಕಾಲೆಳೆಯುವ ಕಾರ್ಯ ಶುರುಮಾಡಿದ್ದಾರೆ. ಟ್ವೀಟರ್ ನಲ್ಲಿ ಇವರಿಬ್ಬರ ಬಗ್ಗೆ ಹಾಸ್ಯಾಸ್ಪದ ಟ್ವೀಟ್ ನೋಡಲು ಸಿಗ್ತಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...