alex Certify
ಕನ್ನಡ ದುನಿಯಾ       Mobile App
       

Kannada Duniya

ದ. ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿಗೆ ದಂಡ ವಿಧಿಸಿದ್ದೇಕೆ….?

21ನೇ ಟೆಸ್ಟ್ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಬೆನ್ನಲ್ಲೇ ಮತ್ತೊಮ್ಮೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಯಲ್ಲಿದ್ದಾರೆ. ಅಂಪೈರ್ ಮೈಕೆಲ್ ಗಾಫ್ ಜೊತೆಗೆ ವಾದಕ್ಕಿಳಿದಿದ್ದಕ್ಕಾಗಿ ಕೊಹ್ಲಿ ಈಗ ದಂಡ ತೆರಬೇಕಾಗಿ ಬಂದಿದೆ.

ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಗೆ ಪಂದ್ಯದ ಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. 25ನೇ ಓವರ್ ನಲ್ಲಿ ಚೆಂಡು ಬದಲಾಯಿಸುವಂತೆ ಕೊಹ್ಲಿ ಅಂಪೈರ್ ಗೆ ಮನವಿ ಮಾಡಿದ್ರು.

ಮಳೆಯಿಂದಾಗಿ ಮೈದಾನವೂ ಒದ್ದೆಯಾಗಿದ್ದರಿಂದ ಬೌಲರ್ ಗೆ ಕಷ್ಟವಾಗ್ತಿದೆ ಎಂದಿದ್ದರು. ಅಂಪೈರ್ ಮೇಲೆ ಕೋಪ ಮಾಡಿಕೊಂಡು ಚೆಂಡನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಪೈರ್ ಜೊತೆಗೆ ವಾದ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಕ್ಕೆ ಕೊಹ್ಲಿಗೆ ದಂಡ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...