alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿ ವೀರತ್ವ ಮೆರೆಯಲಿದ್ಯಾ ವಿರಾಟ್ ಸೇನೆ…?

ಭಾರತ-ದಕ್ಷಿಣ ಆಫ್ರಿಕಾ ನಡುವೆ ಶುಕ್ರವಾರ ಮೊದಲ ಟೆಸ್ಟ್ ಪಂದ್ಯ ಕೇಪ್ ಟೌನ್ ನಲ್ಲಿ ಶುರುವಾಗಲಿದೆ. ಭಾರತ ತಂಡ ತನ್ನ 12ನೇ ಟೆಸ್ಟ್ ಅಭಿಯಾನವನ್ನು ವಿದೇಶಿ ನೆಲದಲ್ಲಿ ಶುರು ಮಾಡಲಿದೆ. ಈ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರತ ಹಿಂದಿನ ಸೋಲಿನ ಕಹಿ ದಾಖಲೆಯನ್ನು ಅಳಿಸಿ ಹಾಕುವ ಪ್ಲಾನ್ ನಲ್ಲಿದೆ.

ಹೊಸ ವರ್ಷದ ಮೊದಲ ಪಂದ್ಯವನ್ನು ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ನಂತ್ರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಆಟಗಾರರಿಗೆ ವಿದೇಶಿ ನೆಲದ ಆಟ, ಸವಾಲಿನ ಸಂಗತಿಯಾಗಿದೆ. ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ತೋರಬೇಕಾಗಿದೆ.

ಐಸಿಸಿ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಇಂಡಿಯಾ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 0-3 ರಿಂದ ಟೆಸ್ಟ್ ಸರಣಿ ಸೋತರೂ ರ್ಯಾಂಕಿಂಗ್ ನಲ್ಲಿ ಬದಲಾವಣೆಯಾಗುವುದಿಲ್ಲ. ಆದ್ರೆ ರ್ಯಾಂಕಿಂಗ್ ಕೊಹ್ಲಿಗೆ ಮುಖ್ಯವಲ್ಲ. ಸತತ 9 ಟೆಸ್ಟ್ ಸರಣಿ ಗೆದ್ದಿರುವ ಇಂಡಿಯಾ ಈ ಸರಣಿಯನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.

ಈ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸಗಳಲ್ಲಿ ಟೀಂ ಇಂಡಿಯಾ ಪ್ರದರ್ಶನ ಚೆನ್ನಾಗಿರಲಿಲ್ಲ. 1992 ರಲ್ಲಿ ನಡೆದ 17 ಪಂದ್ಯಗಳಲ್ಲಿ ಭಾರತ 2 ಪಂದ್ಯ ಮಾತ್ರ ಗೆದ್ದಿತ್ತು. 2006-07 ರಲ್ಲಿ ದ್ರಾವಿಡ್ ನೇತೃತ್ವದಲ್ಲಿ ಒಂದು ಹಾಗೂ 2010-11ರಲ್ಲಿ ಧೋನಿ ನೇತೃತ್ವದಲ್ಲಿ ತಂಡ ಒಂದೊಂದು ಗೆಲುವು ಸಾಧಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...