alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಪಾಕ್ ಪಂದ್ಯ ನೋಡಲು ಬಂದಿದ್ರು ಈ ವಿಶಿಷ್ಟ ಜೋಡಿ

india-pak-couple-funny_twitter_759

ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯವನ್ನು ಇಡೀ ಜಗತ್ತೇ ತುದಿಗಾಲಲ್ಲಿ ನಿಂತು ನೋಡಿದೆ. ಟೀಂ ಇಂಡಿಯಾದ ಅಮೋಘ ಜಯದ ಬಳಿಕ ಇಂಟರ್ನೆಟ್ ನಲ್ಲಿ ಎಲ್ರೂ ಗೆಲುವಿನ ಸಂಭ್ರಮ ಹಂಚಿಕೊಳ್ತಿದ್ದಾರೆ. ಭಾರತದ ಅಭಿಮಾನಿಗಳಂತೂ ಪಾಕಿಗಳ ಸೋಲಿನ ಬಗ್ಗೆ ತಮಾಷೆ ಮಾಡಿದ್ದೇ ಮಾಡಿದ್ದು.

ಇವೆಲ್ಲದರ ನಡುವೆಯೂ ಮ್ಯಾಚ್ ನೋಡಲು ಬಂದಿದ್ದ ಈ ಜೋಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋ ಕೂಡ ವೈರಲ್ ಆಗಿದೆ. ಯಾಕೆ ಗೊತ್ತಾ? ಅವರಿಬ್ಬರ ಕಾಂಬಿನೇಷನ್ ಅಷ್ಟು ಡಿಫರೆಂಟ್ ಆಗಿತ್ತು. ಮಹಿಳೆ ಪಾಕಿಸ್ತಾನದ ಅಭಿಮಾನಿ, ಪಾಕ್ ಬಾವುಟವನ್ನು ಹೊದ್ದು ಕುಳಿತಿದ್ಲು.

ಅವಳ ಪಕ್ಕದಲ್ಲೇ ಇದ್ದ ವ್ಯಕ್ತಿ ಪಕ್ಕಾ ಭಾರತದ ಫ್ಯಾನ್. ಆತ ಭಾರತದ ಬಾವುಟವನ್ನು ಹೊದ್ದಿದ್ದ. ಅಚ್ಚರಿ ಅಂದ್ರೆ ಆತ ಮಹಿಳೆಯ ಹೆಗಲ ಮೇಲೆ ಕೈಹಾಕಿಕೊಂಡು ಕುಳಿತು ಪಂದ್ಯವನ್ನು ವೀಕ್ಷಿಸ್ತಾ ಇದ್ದ. ಅವನಿಗೆ ಟೀಂ ಇಂಡಿಯಾ ಗೆಲುವು ನೋಡಿ ಖುಷಿ, ಆದ್ರೆ ಅವಳಿಗೆ ಮಾತ್ರ ಪಾಕ್ ಸೋಲನ್ನು ಅರಗಿಸಿಕೊಳ್ಳಲು ಆಗ್ತಿರಲಿಲ್ಲ. ಇವರಿಬ್ಬರ ಫೋಟೋ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಕಮೆಂಟ್ಸ್ ಬಂದಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...