alex Certify
ಕನ್ನಡ ದುನಿಯಾ       Mobile App
       

Kannada Duniya

‘ಧೋನಿ ರಿವ್ಯೂವ್ ಸಿಸ್ಟಮ್’ ಗೆ ಟ್ವಿಟರ್ ನಲ್ಲಿ ಭಾರೀ ಮೆಚ್ಚುಗೆ

ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಸೆಣೆಸಾಟ ನಡೆಸಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿತು. ಪಾಕ್ ಓಪನರ್ಸ್ ತಂಡಕ್ಕೆ ಭರ್ಜರಿ ಬುನಾದಿ ಹಾಕಿಕೊಡುವ ಯೋಜನೆ ಹಾಕಿಕೊಂಡಿದ್ರು. ಆದ್ರೆ, ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ರೇಕ್ ಹಾಕಿದ್ರು.

ಪಾಕಿಸ್ತಾನ ಬ್ಯಾಟ್ಸ್ ಮನ್ಸ್ 8 ಓವರ್ ಗಳಲ್ಲಿ 24 ರನ್ ಮಾಡಿ ಭದ್ರ ಬುನಾದಿಯ ಸೂಚನೆ ನೀಡಿದ್ರು. ಆದ್ರೆ, 8ನೇ ಓವರ್ ನ ಕೊನೆಯ ಎಸೆತ ಪಾಕ್ ನ ಲೆಕ್ಕಾಚಾರ ಉಲ್ಟಾ ಮಾಡಿತು. ಚಹಾಲ್ ಎಸೆತವನ್ನು ಇಮಾಮ್ ಉಲ್ ಹಕ್ ತಪ್ಪಾಗಿ ಗುರುತಿಸಿದ್ರು. ಪರಿಣಾಮ ಟೀಮ್ ಇಂಡಿಯಾ ಎಲ್.ಬಿ.ಡಬ್ಲ್ಯೂಗೆ ಮನವಿ ಸಲ್ಲಿಸಿತು. ಆದ್ರೆ, ಅಂಪೈಯರ್ ನಾಟೌಟ್ ಎಂದು ತೀರ್ಪು ನೀಡಿದ್ರು. ಆದ್ರೆ, ರೋಹಿತ್ ಡಿ.ಆರ್.ಎಸ್. ಮೊರೆ ಹೋದ್ರು. ಮೂರನೇ ಅಂಪೈಯರ್ ಪರಿಶೀಲಿಸಿದ ಬಳಿಕ ಔಟ್ ನೀಡಿದ್ರು.

ಡಿ.ಆರ್.ಎಸ್. ನಲ್ಲಿ ಟೀಮ್ ಇಂಡಿಯಾಗೆ ಮೊದಲ ವಿಕೆಟ್ ಲಭಿಸಿತು. ಈ ವಿಕೆಟ್ ಸಂಪೂರ್ಣ ಶ್ರೇಯ, ಡಿ.ಆರ್.ಎಸ್. ಪಡೆಯಲು ಸಮ್ಮತಿ ನೀಡಿದ ಧೋನಿ ಅವರಿಗೆ ಸಲ್ಲುತ್ತದೆ. ವಿಕೆಟ್ ಹಿಂದೆ ನಿಂತುಕೊಂಡ ಧೋನಿ, ಬೌಲ್ ಪಿಚ್ ಆಗುವುದನ್ನು ಹಾಗೂ ಸ್ಟಂಪ್ ಗೆ ತಗಲುತ್ತದಾ ಎಂಬುದನ್ನು ನಿಖರವಾಗಿ ಜಡ್ಜ್ ಮಾಡ್ತಾರೆ. ಹೀಗಾಗಿಯೇ ಅಭಿಮಾನಿಗಳು ಡಿ.ಆರ್.ಎಸ್. ಅನ್ನು ಧೋನಿ ರಿವ್ಯೂವ್ ಸಿಸ್ಟಮ್ ಎಂದು ಕರೆಯುತ್ತಾರೆ. ಧೋನಿ ಸಮಯೋಚಿತ ನಿರ್ಧಾರಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಅಲ್ಲದೆ ಟ್ವಿಟರ್ ನಲ್ಲಿ ತಲೈವಾರನ್ನ ಫ್ಯಾನ್ಸ್ ಗುಣಗಾನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...