alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಪಾಕ್ ಕ್ರಿಕೆಟಿಗರ ಬೆಂಡೆತ್ತಿದ್ದಾರೆ ಅಭಿಮಾನಿಗಳು

India batsman Yuvraj Singh (R) consoles an injured Pakistan Imad Wasim (C) during the ICC Champions trophy match between India and Pakistan at Edgbaston in Birmingham on June 4, 2017. / AFP PHOTO / Paul ELLIS / RESTRICTED TO EDITORIAL USE

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲುಂಡಿರೋದು ಪಾಕ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ. ಪಾಕ್ ಸೋಲಿನ ನಂತರ ಅಲ್ಲಿ ಟಿವಿ ಪುಡಿಗಟ್ಟೋದು ಇವೆಲ್ಲಾ ಕಾಮನ್. ಆದ್ರೆ ಈ ಬಾರಿ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಪಾಕ್ ಕ್ರಿಕೆಟಿಗರಿಗೆ ಬೆಂಡೆತ್ತಿದ್ದಾರೆ.

ಪಾಕಿಸ್ತಾನ ತಂಡದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾದವರು ವೇಗದ ಬೌಲರ್ ವಹಾಬ್ ರಿಯಾಜ್. 8.4 ಓವರ್ ನಲ್ಲಿ ವಹಾಬ್ 87 ರನ್ ಕೊಟ್ಟಿರೋದು ಅಭಿಮಾನಿಗಳನ್ನು ಕೆರಳಿಸಿದೆ. ಟ್ವಿಟ್ಟರ್ ನಲ್ಲಿ ಎಲ್ಲರೂ ವಹಾಬ್ ಕಾಲೆಳೆಯುತ್ತಿದ್ದಾರೆ. ವಹಾಬ್ ವಿರುದ್ಧ ಟ್ರೋಲ್ಸ್ ಗಳ ಸುರಿಮಳೆಯಾಗಿದೆ.

t

ವಹಾಬ್ ರಿಯಾಜ್ ಮಾಧುರಿ ದೀಕ್ಷಿತ್ ದುಪ್ಪಟ್ಟಾಗಿಂತ್ಲೂ ನಿಷ್ಪ್ರಯೋಜಕ ಅಂತಾ ಮಾನ್ ರೆಹಮಾನ್ ಎಂಬಾತ ಟ್ವೀಟ್ ಮಾಡಿದ್ದಾನೆ. ಇನ್ನು ಕೆಲವರು ವಹಾಬ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೊಡಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. 2011ರಲ್ಲಿ 5 ವಿಕೆಟ್ ಪಡೆದಿದ್ದಾರೆ ಅನ್ನೋ ಕಾರಣಕ್ಕೆ ವಹಾಬ್ ರಿಯಾಜ್ ರನ್ನು ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ಕೊಟ್ಟಿದೆ ಅಂತಾ ಕಿಡಿಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...