alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಸಂಘಟಿತ ಆಟಕ್ಕೆ ಪಾಕ್ ಗಢಗಢ….

ಸಾಂಪ್ರದಾಯಿಕ ಎದುರಾಳಿ ನೀಡಿದ್ದ ಸಾಧಾರಣ ಸವಾಲನ್ನು ಮೀರಿ ನಿಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ. ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಕಾದಾಟದಲ್ಲಿ ರೋಹಿತ್ ಪಡೆ 8 ವಿಕೆಟ್ ಗಳಿಂದ ಪಾಕ್ ತಂಡವನ್ನು ಮಣಿಸಿ, ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಆರಂಭದಲ್ಲೇ ಟೀಮ್ ಇಂಡಿಯಾ ಫೇಸರ್ ಭುವನೇಶ್ವರ್ ಕುಮಾರ್ ಶಾಕ್ ನೀಡಿದ್ರು. ಓಪನರ್ಸ್ ರನ್ನು ಪೆವಿಲಿಯನ್ ಗೆ ಅಟ್ಟಿದ ಭುವಿ ಅಬ್ಬರಿಸಿದ್ರು. 3 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕ್ ಗೆ ಅನುಭವಿ ಶೋಯೆಬ್ ಮಲಿಕ್ ಹಾಗೂ ಬಾಬರ್ ಅಜಮ್ ಆಸರೆ ಆದ್ರು. ಈ ಜೋಡಿ ತಂಡಕ್ಕೆ 81 ರನ್ ಕಾಣಿಕೆ ನೀಡಿತು.

ಬಾಬರ್ ಗೆ ಖೆಡ್ಡಾ ತೋಡಿದ ಕುಲ್ದೀಪ್ ಅಬ್ಬರಿಸಿದ್ರು. ಸರ್ಫರಾಜ್ ಖಾನ್ ಇಲ್ಲದ ಹೊಡೆತಕ್ಕೆ ಮುಂದಾಗಿ ಮನೀಷ್ ಪಾಂಡೆ ಹಿಡಿದ ಆಕರ್ಷಕ ಕ್ಯಾಚ್ ಗೆ ಬಲಿಯಾದ್ರು. ಇನ್ನು ಅನುಭವಿ ಶೋಯೆಬ್ ಇಲ್ಲದ ರನ್ ಕದಿಯಲು ಹೋಗಿ 43 ರನ್ ಗಳಿಗೆ ಆಟ ಮುಗಿಸಿದ್ರು.

ಉಳಿದಂತೆ ಫಾಹೀಮ್ ಅಶ್ರಫ್ ಹಾಗೂ ಮೊಹಮ್ಮದ್ ಅಮೀರ್ ರನ್ನು ಹೊರತುಪಡಿಸಿದ್ರೆ, ಉಳಿದೆಲ್ಲಾ ಬ್ಯಾಟ್ಸ್ ಮನ್ಸ್ ಒಂದಂಕಿಯಲ್ಲಿ ಆಟ ಮುಗಿಸಿದ್ರು. ಅಂತಿಮವಾಗಿ ಪಾಕ್ 43.1 ಓವರ್ ಗಳಲ್ಲಿ 162 ರನ್ ಗೆ ಆಲೌಟ್ ಆಯಿತು. ಭಾರತದ ಪರ ಭುವನೇಶ್ವರ್ ಕುಮಾರ್ ಹಾಗೂ ಕೇದಾರ್ ಜಾಧವ್ ತಲಾ ಮೂರು ವಿಕೆಟ್ ಪಡೆದ್ರು.

163 ರನ್ ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಂಡದ ಪರ ಗೆಲುವಿನ ಆಸೆ ಚಿಗುರಿಸಿದ್ರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ನೆರವಿನಿಂದ 52 ರನ್ ಬಾರಿಸಿ ಅಬ್ಬರಿಸಿದ್ರು. ಮೊದಲ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದ ಶಿಖರ್ ಧವನ್ 46 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಫಾಹೀಮ್ ಎಸೆತದಲ್ಲಿ ಬಾಬರ್ ಗೆ ಕ್ಯಾಚ್ ನೀಡಿದ್ರು.

ಮೂರನೇ ವಿಕೆಟ್ ಗೆ ದಿನೇಶ್ ಕಾರ್ತಿಕ್ ಹಾಗೂ ಅಂಬಟಿ ರಾಯುಡು ಗೆಲುವಿಗೆ ಬೇಕಿದ್ದ ಅಗತ್ಯ ರನ್ ಕಲೆ ಹಾಕಿ ಮಿಂಚಿದ್ರು. ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಭುವನೇಶ್ವರ್ ಮುಡಿಗೆ ಪಂದ್ಯ ಶ್ರೇಷ್ಠ ಗರಿ ಸಂದಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...