alex Certify
ಕನ್ನಡ ದುನಿಯಾ       Mobile App
       

Kannada Duniya

ರನ್ `ಶಿಖರ’ ಏರಿದ ‘ರೋಹಿತ್’, ಭಾರತಕ್ಕೆ ಮಣಿದ ಪಾಕ್ 

ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ ಶತಕದ ನೆರವಿನಿಂದ ಭಾರತ ತಂಡ 9 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್, 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 237 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಟೀಮ್ ಇಂಡಿಯಾ ಇನ್ನು 63 ಎಸೆತ ಬಾಕಿ ಇರುವಂತೆಯೇ 9 ವಿಕೆಟ್ ಗಳಿಂದ ಪಂದ್ಯ ಗೆದ್ದು ಬೀಗಿತು. ಈ ಮೂಲಕ ಸೂಪರ್ ಫೋರ್ ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು, ಆರಂಭಿಕರಾದ ಇಮಾಮ್ ಉಲ್ ಹಕ್, ಫಖಾರ್ ಜಮನ್, ಬಾಬರ್ ಅಜಂ, ಜವಾಬ್ದಾರಿಯುತ ಆಟ ಆಡುವಲ್ಲಿ ವಿಫಲರಾದ್ರು.

4ನೇ ವಿಕೆಟ್ ಗೆ ಶೋಯಿಬ್ ಹಾಗೂ ನಾಯಕ ಸರ್ಫರಾಜ್ ತಂಡಕ್ಕೆ ಆಸರೆಯಾದ್ರು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಶ್ರಮಿಸಿತು. ಈ ಜೋಡಿ ಪಾಕ್ ತಂಡಕ್ಕೆ ಶತಕದ ಜೊತೆಯಾಟ ನೀಡಿತು. ಸರ್ಫರಾಜ್ 44 ರನ್ ಗಳಿಸಿದ್ದಾಗ ಕುಲ್ದೀಪ್ ಗೆ ವಿಕೆಟ್ ಒಪ್ಪಿಸಿದ್ರು.

ಶೋಯಿಬ್ ಮಲಿಕ್ 90 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ಬೂಮ್ರಾಗೆ ವಿಕೆಟ್ ಒಪ್ಪಿಸಿದ್ರು.

ಅಂತಿಮವಾಗಿ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 233 ರನ್ ಕಲೆ ಹಾಕಿತು. ಟೀಮ್ ಇಂಡಿಯಾ ಪರ ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರಿತ್ ಬೂಮ್ರಾ ತಲಾ ಎರಡು ವಿಕೆಟ್ ಪಡೆದು ಅಬ್ಬರಿಸಿದ್ರು.

ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಪಾಕ್ ನೀಡಿದ ಜೀವದಾನದ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ರೋಹಿತ್ ಅಬ್ಬರಿಸಿದ್ರು. ಶಿಖರ್ ಧವನ್ ಹಾಗೂ ರೋಹಿತ್ ವಿಕೆಟ್ ಕಾಯ್ದುಕೊಂಡು ರನ್ ಕಲೆ ಹಾಕುತ್ತಾ ಸಾಗಿದ್ರು. ಈ ಜೋಡಿಯನ್ನು ಬೇರ್ಪಡಿಸಲು ಪಾಕ್ ಬೌಲರ್ ಗಳು ಹೈರಾಣಾದ್ರು.

ಮಹತ್ವದ ಪಂದ್ಯದಲ್ಲಿ ಉಭಯ ಬ್ಯಾಟ್ಸ್ ಮನ್ ಲಯಕ್ಕೆ ಮರಳಿದ್ದರಿಂದ ಪಂದ್ಯ ಏಕಪಕ್ಷೀಯಯವಾಯಿತು. ಶಿಖರ್ ಧವನ್ 100 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 114 ರನ್ ಬಾರಿಸಿ ಅಬ್ಬರಿಸಿದ್ರು. ರೋಹಿತ್ ಶರ್ಮಾ ಸಹ ರನ್ ಕಲೆ ಹಾಕಿ ಆರ್ಭಟಿಸಿದ್ರು. ಅಲ್ಲದೆ ತಮ್ಮ ವೃತ್ತಿ ಜೀವನದ 19ನೇ ಶತಕ ಬಾರಿಸಿದ್ರು.

ಅಂತಿಮವಾಗಿ ಟೀಮ್ ಇಂಡಿಯಾ 39.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 238 ರನ್ ಕಲೆ ಹಾಕಿ ಜಯ ಸಾಧಿಸಿತು. ಕ್ಲಾಸ್ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ ಮುಡಿಗೆ ಪಂದ್ಯ ಶ್ರೇಷ್ಠ ಗರಿ ಸಂದಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...