alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿ ಕುರಿತು ಸ್ಟೀವ್ ವಾ ಹೇಳಿದ್ದೇನು…?

ಅಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ವಾ ವಿಮರ್ಶೆಗಳನ್ನ ಮಾಡೋಕೆ ನಿಂತರೆ ಅದನ್ನ ಕ್ರಿಕೆಟ್ ಜಗತ್ತು ತುಂಬಾ ಸಮಾಧಾನದಿಂದ ಆಲಿಸುತ್ತದೆ. ಏಕಂದ್ರೆ ಆಸ್ಟ್ರೇಲಿಯಾಗೆ ಎರಡು ಬಾರಿ ವಿಶ್ವಕಪ್ ಗೆದ್ದು ಕೊಟ್ಟ ನಾಯಕನ ಕ್ರೀಡಾ ಪ್ರೌಢಿಮೆ ಅವರ ಅನಾಲಿಸಿಸ್ ಅಷ್ಟು ಪವರ್ಫುಲ್ ಆಗಿರುತ್ತೆ. ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೀತಿರೋ ಟೆಸ್ಟ್ ಪಂದ್ಯಗಳ ಬಗ್ಗೆ ಸ್ಟೀವ್ ವಾ ಈಗ ಮಾತನಾಡಿದ್ದಾರೆ.

ಅದರಲ್ಲೂ ಎಡ್ಜ್ ಬಾಸ್ಟನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ತಮ್ಮ ಅಭಿಪ್ರಾಯವನ್ನ ಹಾಗು ಅವರ ದೃಷ್ಟಿಕೋನವನ್ನು ಕ್ರಿಕೆಟ್ ಲೋಕದ ಮುಂದಿಟ್ಟಿದ್ದಾರೆ. ವಾ ಪ್ರಕಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ಮನ್ ಅಂತೆ.

ಎಡ್ಜ್ ಬಾಸ್ಟನ್ ಟೆಸ್ಟ್ ನಲ್ಲಿ ಕೊಹ್ಲಿ ಮೊದಲ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 149 ಮತ್ತು 51 ರನ್ ಗಳನ್ನ ಕಲೆಹಾಕಿ ಭಾರತ ತಂಡಕ್ಕೆ ಆಸರೆಯಾದರು. ಕೊಹ್ಲಿಗೆ ಯಾವುದೇ ಫಾರ್ಮೆಟ್ ನ ಪಂದ್ಯವನ್ನು ಕೂಡ ತಂಡದತ್ತ ವಾಲಿಸುವ ತಾಕತ್ತು ಇದೆ. ಮೊದಲ ಟೆಸ್ಟ್ ನಲ್ಲಿ ಗಳಿಸಿದ 149 ಮತ್ತು 51 ರನ್ ಗಳು ತಂಡಕ್ಕೆ ಸಹಕಾರಿಯಾಗಿವೆ. ಅತ್ಯುನ್ನತವಾದ ಬ್ಯಾಟಿಂಗ್ ತಂತ್ರಗಾರಿಕೆ ಕೊಹ್ಲಿಗೆ ಸಿದ್ದಿಸಿದೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯಗಳನ್ನ ಹೊಂದಿದ್ದಾರೆ. ಆದ್ರೆ ಎಬಿಡಿ ಟೆಸ್ಟ್ ಕ್ರಿಕೆಟ್ ಆಡೋದಿಲ್ಲ. ಇದೇ ಕಾರಣಕ್ಕೆ ಕೊಹ್ಲಿ ವಿಶಿಷ್ಟ ಸ್ಥಾನ ಪಡೀತಾರೆ ಅನ್ನೋದು ಸ್ಟೀವ್ ವಾ ಅಭಿಪ್ರಾಯ.

ಟೆಸ್ಟ್ ನ ನಂಬರ್ 1 ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿ ಬ್ಯಾಟಿಂಗ್ ನಲ್ಲಿ ಟೆಸ್ಟ್ ಕ್ರಿಕೆಟ್ ನ ಗತವೈಭವದ ದಿನಗಳು ನೋಡೋದಕ್ಕೆ ಸಿಗ್ತಿವೆ. ಬ್ರಿಯಾನ್ ಲಾರಾ, ಸಚಿನ್ , ವಿವಿ ರಿಚರ್ಡ್ಸನ್ ಅವರ ಸಾಲಿನಲ್ಲಿ ಗುರುತಿಸುವ ಆಟಗಾರರಾಗ್ತಾರೆ ಅನ್ನೋದು ವಾ ಅಭಿಪ್ರಾಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...