alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಟ್ ಮ್ಯಾನ್ ಶತಕ: ಸೂಪರ್ ಸೆಂಚುರಿ ಭಾರತಕ್ಕೆ ಟಿ- 20ಸರಣಿ

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ರೋಹಿತ ಶರ್ಮಾ ಭರ್ಜರಿ ಶತಕದೊಂದಿಗೆ ಇಂಗ್ಲೆಂಡ್ ವಿರುದ್ಧದ ಟಿ- 20 ಸರಣಿಯನ್ನ ಭಾರತ 2-1ರಲ್ಲಿ ಗೆದ್ದುಕೊಂಡಿದೆ. ಟಾಸ್ ಗೆದ್ದ ಭಾರತ ಇಂಗ್ಲೆಂಡ್ ನ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಭಾರತದ ಬೌಲಿಂಗ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಇಂಗ್ಲೆಂಡ್ ನ ಜೇಸನ್ ರಾಯ್ ಅವರ ಅರ್ಧಶತಕ ಜೋಸ್ ಬಟ್ಲರ್ ಮಿಂಚಿನ ಆಟ ಇಂಗ್ಲೆಂಡ್ ಸ್ಕೋರ್ಗೆ ಭದ್ರ ಬುನಾದಿಯಾಯ್ತು. ಭಾರತೀಯ ಬೌಲರ್ಗಳನ್ನ ಕಾಡಿದ ಆರಂಭಿಕ ಜೋಡಿ 94 ರನ್ಗಳ ಜೊತೆಯಾಟವಾಡಿತು.

ಆನಂತರದಲ್ಲಿ ಅಲೆಕ್ಸ್ ಹೇಲ್ಸ್ ಅವರ ಬಿರುಸಿನ ಬ್ಯಾಟಿಂಗ್ನಿಂದ ಇಂಗ್ಲೆಂಡ್ ತಂಡ 150 ರನ್ಗಳ ಗಡಿ ದಾಟಿ ಸವಾಲಿನ ಮೊತ್ತ ಪೇರಿಸುವ ಸೂಚನೆ ನೀಡಿತು. ಆದ್ರೆ ಹಾರ್ದಿಕ್ ಪಾಂಡ್ಯ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿ ನಾಲ್ವರು ಬ್ಯಾಟ್ಸ್ಮನ್ಗಳಗೆ ಪೆವಿಲಿಯನ್ ದಾರಿ ತೋರಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್ಗಳಲ್ಲಿ 198ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತು.

ಟಾರ್ಗೆಟ್ ಚೇಸ್ ಮಾಡುವ ಉತ್ಸಾಹದಲ್ಲಿ ಫೀಲ್ಡಿಗಿಳಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಇನ್ಸಿಂಗ್ಸ್ ಶತಕದ ವೈಭವ ಸಿಕ್ಕಿತು. ರಾಹುಲ್ ಮತ್ತು ಶಿಖರ್ ಧವನ್ ಅಲ್ಪಮೊತ್ತಕ್ಕೆ ಔಟ್ ಆದ್ರೂ ರೋಹಿತ್ ಭಾರತಕ್ಕೆ ಅಸರೆಯಾಗಿ ನಿಂತರು. ವಿರಾಟ್ ಕೊಹ್ಲಿ 43 ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 33ರನ್ಗಳಿಸಿ ರೋಹಿತ್ಗೆ ನೆರವಾದರು. ಅಂತಿಮವಾಗಿ ರೋಹಿತ್ ಶರ್ಮಾ ಶತಕದೊದಿಗೆ 18.4 ಓವರ್ಗಳಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 201 ರನ್ಗಳಿಸಿ ಅಮೋಘ ಜಯ ದಾಖಲಿಸಿತು.

56 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಸಿಡಿಸಿದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದೇ ಪಂದ್ಯದಲ್ಲಿ ಧೋನಿ ಐದು ಕ್ಯಾಚ್ ಹಿಡಿಯುವುದರೊಂದಿಗೆ ಅಂತಾರಾಷ್ಟ್ರೀಯ ಟಿ- 20 ಪಂದ್ಯದದಲ್ಲಿ ಐದು ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂದ ದಾಖಲೆಯನ್ನ ಬರೆದರು. 50 ಕ್ಯಾಚ್ಗಳನ್ನ ಪೂರ್ಣಗೊಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರವಾದರು. ಜುಲೈ 12 ರಂದು ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾದ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...