alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಇಂಗ್ಲೆಂಡ್ ನಡುವಣ ಏಕದಿನ, ಟಿ-20 ಸರಣಿ ರದ್ದು?

india

ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿ ರದ್ದಾಗುವ ಸಾಧ್ಯತೆ ಇದೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್ ಹುದ್ದೆಯಿಂದ ವಜಾ ಮಾಡಿದೆ.

ಹಾಗಾಗಿ ಮುಂದಿನ ಸರಣಿ ಗೊಂದಲದ ಗೂಡಾಗಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಣ ಏಕದಿನ, ಹಾಗೂ ಟಿ-20 ಪಂದ್ಯಗಳ ಸರಣಿ ಅನಿಶ್ಚಿತತೆಯಲ್ಲಿದೆ.

ಉಪಾಧ್ಯಕ್ಷರನ್ನು ಹಾಲಿ ಮುಖ್ಯಸ್ಥರಾಗಿ ನಾಮನಿರ್ದೇಶನ ಮಾಡುವಂತೆ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಗೆ ಸೂಚಿಸಿದೆ. ಆದ್ರೆ ಸದ್ಯ ಬಿಸಿಸಿಐನಲ್ಲಿರುವ ಎಲ್ಲಾ ಅಧಿಕಾರಿಗಳೂ ಅಧ್ಯಕ್ಷ ಹುದ್ದೆಗೆ ಅನರ್ಹರಾಗಿರುವುದರಿಂದ ಮುಂದೇನು ಎಂಬ ಪ್ರಶ್ನೆ ಕಾಡತೊಡಗಿದೆ. ಅಷ್ಟೇ ಅಲ್ಲ ಲೋಧಾ ಸಮಿತಿಯ ಶಿಫಾರಸುಗಳನ್ನೆಲ್ಲ ಜಾರಿ ಮಾಡಿದ್ದೇ ಆದಲ್ಲಿ ಅಂತರಾಷ್ಟ್ರೀಯ ಪಂದ್ಯಗಳನ್ನು ರದ್ದು ಮಾಡುವುದು ಅನಿವಾರ್ಯ ಎನ್ನಲಾಗ್ತಾ ಇದೆ. ಸೈನಿಂಗ್ ಅಥಾರಿಟಿ ಇಲ್ಲದೆ ಸರಣಿ ನಡೆಸುವುದು ಕೂಡ ಸಾಧ್ಯವಿಲ್ಲ. ಹಾಗಾಗಿ ಭಾರತ-ಇಂಗ್ಲೆಂಡ್ ಸರಣಿ ಮೇಲೆ ಕಾರ್ಮೋಡ ಕವಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...