alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲೊಂದು ಪ್ರೇಮ ಕಥೆ

ಒಂದು ಗಂಡಿಗೆ ಹೆಣ್ಣು ಯಾರು ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗ್ತದೆ ಅನ್ನೋ ಮಾತು ನೀವೆಲ್ಲಾ ಕೇಳಿರ್ತೀರಿ. ಆದ್ರೆ ಮೈದಾನದಲ್ಲಿ ನಾನು ನೀನು ಜೋಡಿಯಾದೆವು ಅನ್ನೋದನ್ನ ತೋರಿಸಿಕೊಟ್ಟಿದ್ದಾನೆ ಒಬ್ಬ ಯುವ ಪ್ರೇಮಿ. ಇಂತಾ ಒಂದು ಕೌತುಕಮಯವಾದ ಸಂದರ್ಭ ನೋಡೋಕೆ ಸಿಕ್ಕಿದ್ದು ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ.

ಪಂದ್ಯದ ನಡುವೆ ಯುವಕನೊಬ್ಬ ಯುವತಿಯೊಂದಿಗೆ ಮಾತನಾಡುತ್ತಿರುವ ದೃಶ್ಯ ಕಂಡು ಬಂತು. ಇಲ್ಲೇನು ಸಮ್ಥಿಂಗ್ ನಡೀತಿದೆ ಅನ್ನೋದನ್ನ ಅಂದಾಜಿಸಿದ ಕ್ಯಾಮರಾ ಕಣ್ಣು ಆ ಯುವಕನನ್ನ ಜೂಮ್ ಮಾಡಿ ನೋಡ್ತು. ಇಬ್ಬರ ನಡುವಿನ ಆ ಮಧುರ ಪಿಸುಮಾತು ಮೈದಾನದಲ್ಲಿದ್ದ ದೊಡ್ಡ ಪರದೆಯ ಮೇಲೂ ಬರ್ತಾನೆ ಇತ್ತು. ಇದರ ನಡುವೆಯೇ ಆ ಯುವಕ ಯುವತಿಗೆ ಪ್ರೇಮ ನಿವೇದನೆ ಮಾಡಿಯೇ ಬಿಟ್ಟ. ಅದಕ್ಕೆ ಆಕೆ ಅಸ್ತು ಅಂತ ಹೇಳಿಬಿಟ್ಟಳು. ಮದುವೆಗೂ ಆಕೆ ಓಕೆ ಅಂದುಬಿಟ್ಟಿದ್ದಾಳೆ.

ಲಾರ್ಡ್ಸ್ ಮೈದಾನದಲ್ಲಿದ್ದ ಟಿವಿ ಕ್ಯಾಮರಾಗಳು ಮಾತ್ರವಲ್ಲ. ಅಕ್ಕಪಕ್ಕದಲ್ಲಿದ್ದ ಪ್ರೇಕ್ಷಕರು ತಮ್ಮ ಸೆಲ್ ಫೋನ್ ಗಳಲ್ಲಿ ಇಡೀ ಸನ್ನಿವೇಶನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಈ ನವಜೋಡಿ ಈಗ ವಿಶ್ವದಾದ್ಯಂತ ಫೇಮಸ್ ಆಗಿಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...