alex Certify
ಕನ್ನಡ ದುನಿಯಾ       Mobile App
       

Kannada Duniya

ಸರಣಿ ಕೈ ವಶಕ್ಕೆ ಇಂಗ್ಲೆಂಡ್ ಕಾರ್ಯತಂತ್ರ

ಟೀಮ್​ ಇಂಡಿಯಾ ಹಾಗೂ ಇಂಗ್ಲೆಂಡ್​​ ನಡುವಣ ಮೂರನೇ ಏಕದಿನ ಪಂದ್ಯ ನಾಳೆ ನಡೆಯಲಿದೆ. ಕೊನೆಯ ಏಕದಿನ ಫೈಟ್​​ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಇಂಗ್ಲೆಂಡ್​ ಏಕದಿನ ಸರಣಿಯನ್ನು ವಶಕ್ಕೆ ಪಡೆಯಲು ಪ್ಲಾನ್ ಮಾಡಿಕೊಂಡಿದ್ದು, ಆಂಗ್ಲರ ತಂಡದಲ್ಲಿ ಬದಲಾವಣೆ ಗಾಳಿ ಬೀಸಿದೆ. ಇಂಗ್ಲೆಂಡ್​ ತಂಡವನ್ನು ಜೇಮ್ಸ್​​ ವಿನ್ಸ್​​ ಸೇರಿಕೊಂಡಿದ್ದಾರೆ.

ಜೇಮ್ಸ್​ ಇಂಗ್ಲೆಂಡ್​ ಪರ 13 ಟೆಸ್ಟ್​ ಹಾಗೂ 5 ಏಕದಿನ ಪಂದ್ಯ ಆಡಿದ್ದಾರೆ. ಮಾರ್ಚ್​​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದಿದ್ದ ಟೆಸ್ಟ್​​ ಪಂದ್ಯದಲ್ಲಿ ಆಡಿದ್ದ ಜೇಮ್ಸ್​​ ರನ್​ ಕಲೆ ಹಾಕಿ ಭರವಸೆ ಮೂಡಿಸಿದ್ದರು.

ಏಕದಿನ ಕ್ರಿಕೆಟ್​ನಲ್ಲಿ ಅಗ್ರಸ್ಥಾನ ಹೊಂದಿರುವ ಇಂಗ್ಲೆಂಡ್, ಸರಣಿ ಗೆಲುವಿನ ಲೆಕ್ಕಾಚಾರ ಹಾಕುತ್ತಿದೆ. ಲಾರ್ಡ್ಸ್​​ ಅಂಗಳದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಇಯಾನ್​ ಮಾರ್ಗನ್​ ಪಡೆ 86 ರನ್​​ಗಳ ಜಯ ದಾಖಲಿಸಿ ಸರಣಿ ಜೀವಂತವಾಗಿಸಿದೆ. ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ಫಾರ್ಮ್​​ಗೆ ಮರಳಿರುವ ರೂಟ್​​, ವಿಶ್ವಾಸ ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...