alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ವಿರುದ್ದದ ಪಂದ್ಯದ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯಲಿದೆ ಇಂಗ್ಲೆಂಡ್ ತಂಡ…!

ಬರ್ಮಿಂಗ್ಹ್ಯಾಮ್ ನಲ್ಲಿ ನಾಳೆಯಿಂದ ಇಂಗ್ಲೆಂಡ್ ಹಾಗೂ ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯ ಆತಿಥೇಯ ಇಂಗ್ಲೆಂಡ್ ಪಾಲಿಗೆ ಅವಿಸ್ಮರಣೀಯವಾಗಿದೆ. ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲು ಸಿದ್ಧವಾಗಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ 1000 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆ ಜೋ ರೂಟ್ ಪಡೆಯದ್ದಾಗಲಿದೆ. ಈವರೆಗೆ ಈ ಸಾಧನೆಯನ್ನು ವಿಶ್ವದ ಬೇರೆ ಯಾವ ತಂಡ ಸಹ ಮಾಡಿಲ್ಲ. ಹೀಗಾಗಿ ಸ್ಮರಣೀಯ ಪಂದ್ಯಕ್ಕಾಗಿ ಐಸಿಸಿ ಸಹ, ಇಂಗ್ಲೆಂಡ್ ತಂಡಕ್ಕೆ ಶುಭಕೋರಿದೆ.

1877ರಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಆಡಲು ಆರಂಭಿಸಿತು. ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಅಂಗಳದಲ್ಲಿ ಮೊದಲ ಪಂದ್ಯ ಆಡಿ ಸೈ ಎನಿಸಿಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ 999 ಪಂದ್ಯ ಆಡಿದೆ. ಇದ್ರಲ್ಲಿ ಆಂಗ್ಲರ ಪಡೆ 357 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 297 ರಲ್ಲಿ ಸೋಲು ಕಂಡಿದ್ದು, 345 ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿವೆ.

ಎಡ್ಜ್ ಬಾಸ್ಟನ್ ಅಂಗಳ 1000 ನೇ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈವರೆಗೆ ಈ ಮೈದಾನಲ್ಲಿ 50 ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ 27 ರಲ್ಲಿ ಜಯ ಸಾಧಿಸಿದೆ. ಇನ್ನು ಭಾರತ ಈ ಅಂಗಳದಲ್ಲಿ ಆರು ಬಾರಿ ಕಣಕ್ಕೆ ಇಳಿದ್ರೆ, ಒಮ್ಮೆಯೂ ಜಯದ ಸವಿಯನ್ನು ಉಂಡಿಲ್ಲ.

ಇಂಗ್ಲೆಂಡ್ ಹಾಗೂ ಭಾರತ ತಂಡಗಳು 177 ಟೆಸ್ಟ್ ಪಂದ್ಯಗಳಲ್ಲಿ ಅಖಾಡ ಪ್ರವೇಶಿಸಿವೆ. ಈ ಲೆಕ್ಕಾಚಾರದಲ್ಲೂ ಇಂಗ್ಲೆಂಡ್ ಮುಂದಿದೆ. ಆಂಗ್ಲರ ಪಡೆ 43 ಬಾರಿ ಜಯದ ನಗೆ ಬೀರಿದ್ರೆ, 25ರಲ್ಲಿ ಸೋಲು ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...