alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಹೈ ಓಲ್ಟೇಜ್ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ

ಟೀಂ ಇಂಡಿಯಾ ಇಂದು ಇಂಗ್ಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯವನ್ನಾಡಲಿದೆ. ಭಾರತೀಯ ಸಮಯ ರಾತ್ರಿ 10 ಗಂಟೆಗೆ ಪಂದ್ಯ ಶುರುವಾಗಲಿದೆ. ಇಂಗ್ಲೆಂಡ್ ಅನೇಕ ವರ್ಷಗಳಿಂದ ಉತ್ತಮ ಪ್ರದರ್ಶನ ತೋರ್ತಿದೆ. ಭಾರತ ಕೂಡ ಕಳೆದ 7 ಸರಣಿಯಲ್ಲಿ ಅಜೇಯವಾಗಿದೆ. ಹಾಗಾಗಿ ಇಂದು ನಡೆಯುವ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ.

ಜಸ್ಪ್ರೀತ್ ಬೂಮ್ರಾ ಪಂದ್ಯದಿಂದ ಹೊರಗಿರುವುದು ಭಾರತದ ಚಿಂತೆಗೆ ಕಾರಣವಾಗಿದೆ. ಹೆಬ್ಬೆರಳು ಗಾಯದಿಂದ ಬಳಲುತ್ತಿರುವ ಬೂಮ್ರಾ ಇಂಗ್ಲೆಂಡ್ ವಿರುದ್ಧ ನಡೆಯುವ  ಟಿ-20 ಪಂದ್ಯದಿಂದ ಹೊರಗುಳಿಯಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯವನ್ನು ಕಠಿಣ ಪಂದ್ಯವೆಂದಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಎರಡೂ ತಂಡದ ಆಟಗಾರರು ಹತ್ತಿರವಾಗಿದ್ದರಿಂದ ಆಟಗಾರರ ಮಧ್ಯೆಯಿದ್ದ ಅಂತರ ಕಡಿಮೆಯಾಗಿದೆ. ಇಂಗ್ಲೆಂಡ್ ಆಟಗಾರರ ಬಲಾಬಲದ ಬಗ್ಗೆ ತಿಳಿದಿದೆ. ಹಾಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಎರಡೂ ತಂಡಗಳ ಮಧ್ಯೆ ತೀವ್ರ ಪೈಪೋಟಿ ನೋಡಬಹುದು ಎಂದಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಪ್ರದರ್ಶನ ನಿರಾಶಾದಾಯಕವಾಗಿತ್ತು. ಈ ಬಾರಿ ಕೂಡ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಕೊಹ್ಲಿ ಮೇಲೆ ವೈಯಕ್ತಿಕ ಒತ್ತಡ ಜಾಸ್ತಿಯಿದೆ. ಆದ್ರೆ ಗೆಲುವಿನ ಮೇಲೆ ಹೆಚ್ಚು ಗಮನವಿದೆ. ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಪ್ರದರ್ಶನ ಬಹಳ ಮುಖ್ಯವೆಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...