alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರ್ಡ್ಸ್ ನ ಊಟದ ಮೆನುವಿನಲ್ಲಿ ಏನೆಲ್ಲಾ ಇತ್ತು ಗೊತ್ತಾ…?

ಲಾರ್ಡ್ಸ್ ಅಂಗಳದಲ್ಲಿ ಗುರುವಾರದಿಂದ ಆರಂಭವಾಗಬೇಕಿದ್ದ ಎರಡನೇ ಟೆಸ್ಟ್ ಗೆ ಮಳೆ ಅಡ್ಡಿಯಾಗಿದೆ. ಇಂಗ್ಲೆಂಡ್ ನಲ್ಲಿ ಬದಲಾಗುತ್ತಿರುವ ವಾತಾವರಣದ ಪರಿಣಾಮ, ಮೊದಲ ದಿನ ಟಾಸ್ ಸಹ ಆಗದೆ ಮೊಟಕುಗೊಳಿಸಲಾಗಿದೆ.

ಟೀಮ್ ಇಂಡಿಯಾ ಆಟಗಾರರು ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತು, ಈಗ ಆಟ ಆರಂಭವಾಗುತ್ತದೆ, ಆಮೇಲೆ ಆಗುತ್ತದೆ ಎಂದು ಕಾದು ಕಾದು ಸುಸ್ತಾದ್ರು. ಆದ್ರೆ, ಇವರ ಬೇಸರ ಭೋಜನ ವಿರಾಮದವರೆಗೆ ಮಾತ್ರ ಇತ್ತು. ನಂತರ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಎಸ್….ನಿನ್ನೆಯ ವಾತಾವರಣ ಟೀಮ್ ಇಂಡಿಯಾ ಆಟಗಾರರಿಗೆ ಉಪಯುಕ್ತವಾಗಿತ್ತು. ಪಂದ್ಯಕ್ಕೆ ಮಳೆ ಅಡ್ಡಿ ಮಾಡಿತು. ಆಟಗಾರರು ಊಟ ಮಾಡೋಣ ಎಂದು ಊಟದ ಕೋಣೆ ಪ್ರವೇಶಿಸಿದ್ರು. ಆದ್ರೆ, ಕ್ರಿಕೆಟ್ ಕಾಶಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಖಾದ್ಯಗಳು ಆಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡವು. ಭೋಜನಕ್ಕೆ ಚಿಕನ್, ಪನ್ನಿರ್ ಟಿಕ್ಕಾ, ಕರ್ರಿ ಕಂಡು ಆಟಗಾರರು ಹಾಗೂ ಸಿಬ್ಬಂದಿಯ ಮುಖದಲ್ಲಿ ಮಂದಹಾಸ ಮೂಡಿತು.

ಇಂದು ದಿನದ ಆಟಕ್ಕೆ ಮಳೆ ಅವಕಾಶ ಮಾಡಿಕೊಡುತ್ತದ್ದಾ ಎಂಬ ಪ್ರಶ್ನೆ ಎದ್ದಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ 1-0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ಅಂಗಳದಲ್ಲಿ ಗೆಲುವಿನ ಕೇಕೆ ಹಾಕುವ ಪ್ಲಾನ್ ವಿರಾಟ್ ಕೊಹ್ಲಿ ಬಳಗದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...