alex Certify
ಕನ್ನಡ ದುನಿಯಾ       Mobile App
       

Kannada Duniya

ಠಾಕೂಠೀಕಾಗಿ ಪಂದ್ಯ ವೀಕ್ಷಿಸಲು ಬಂದ ವಿಜಯ್ ಮಲ್ಯ…!

ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ ಮಲ್ಯ ಶುಕ್ರವಾರ ಲಂಡನ್‌ನ ಓವಲ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಶುಕ್ರವಾರ ಮಲ್ಯ ಅವರು ಕ್ರೀಡಾಂಗಣ ಪ್ರವೇಶಿಸುತ್ತಿರುವ 15 ಸೆಕೆಂಡಿನ ವಿಡಿಯೋವನ್ನು ಎಎನ್ಐ ನ್ಯೂಸ್ ಏಜೆನ್ಸಿ ಪೋಸ್ಟ್ ಮಾಡಿದೆ. ಬಿಳಿ ಪ್ಯಾಂಟ್, ಕಪ್ಪು ಕೋಟು ಧಿರಿಸಿನಲ್ಲಿದ್ದ ಮಲ್ಯ ಕ್ರೀಡಾಂಗಣದೊಳಗೆ ತೆರಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೋಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡದ ಸದಸ್ಯರನ್ನು ಭೇಟಿ ಮಾಡಲು ಮಲ್ಯ ಬಯಸಿದ್ದರೆಂದು ಮೂಲಗಳು ತಿಳಿಸಿವೆ. ಆದರೆ ಭಾರತ ಸರ್ಕಾರ ಭೇಟಿಗೆ ಅವಕಾಶ ನಿರಾಕರಿಸಿದೆ.

62 ವರ್ಷದ ಮಲ್ಯ ಕಳೆದ ವರ್ಷ ಏಪ್ರಿಲ್ ನಲ್ಲಿ ಬಂಧನವಾದ ಬಳಿಕ ಬೇಲ್ ಮೇಲೆ ಹೊರಗಿದ್ದಾರೆ. ಭಾರತದಲ್ಲಿ 9 ಸಾವಿರ ಕೋಟಿ ವ್ಯವಹಾರ ಸಂಬಂಧ ಪ್ರಕರಣದ ಆರೋಪಿಯಾಗಿದ್ದು, ಭಾರತವು ಅವರನ್ನು ಹಸ್ತಾಂತರಿಸುವ ಒತ್ತಾಯ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...