alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್​ ವೇಗಕ್ಕೆ ಎಬಿಡಿ ದಾಖಲೆ ಉಡೀಸ್​​…!

ಲೀಡ್ಸ್​​ ಅಂಗಳದಲ್ಲಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ದಾಖಲೆ ಬರೆದಿದ್ದಾರೆ. ನಾಯಕನಾಗಿ ಕಡಿಮೆ ಪಂದ್ಯಗಳಲ್ಲಿ 3000 ರನ್​ ಬಾರಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಚೇಸಿಂಗ್ ಸ್ಟಾರ್, ಮಿಸ್ಟರ್​ 360 ಖ್ಯಾತಿಯ ಎಬಿ ಡಿವಿಲಿಯರ್ಸ್​​ ರೆಕಾರ್ಡ್​​ ಅಳಿಸಿ ಹಾಕಿದ್ದಾರೆ.

ನಿನ್ನೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಪಡೆಯಿತು. ಆರಂಭಿಕರು ಸಮಯೋಚಿತ ಆಟವಾಡದೆ ಪೆವಿಲಿಯನ್ ಸೇರಿದ್ರು. ತಂಡದ ನಾಯಕ ವಿರಾಟ್​ ಕೊಹ್ಲಿ, ಬೌನ್ಸಿ ಟ್ರ್ಯಾಕ್​​ನಲ್ಲಿ ಎಚ್ಚರಿಕೆಯ ಆಟ ಆಡಿ ಗಮನ ಸೆಳೆದ್ರು. ಈ ಪಂದ್ಯದಲ್ಲಿ ಕೊಹ್ಲಿ 12 ರನ್​ ಬಾರಿಸುತ್ತಿದ್ದಂತೆ ಮತ್ತೊಂದು ಮೈಲುಗಲ್ಲು ಮುಟ್ಟಿದ್ರು. ಪಂದ್ಯದ 10ನೇ ಓವರ್​​ನಲ್ಲಿ ಡೇವಿಡ್​ ವೆಲ್ಲೆ ಎಸೆದ ಶಾರ್ಟ್​​ ಆಫ್​ ಲೆಂಥ್​ ಎಸೆತವನ್ನು ಥರ್ಡ್​​ ಮ್ಯಾನ್ ​ನತ್ತ ತಳ್ಳಿದ ಕೊಹ್ಲಿ, ಏಕದಿನ ಕ್ರಿಕೆಟ್​ನಲ್ಲಿ ದಾಖಲೆ ಬರೆದ್ರು.

ವಿರಾಟ್ ಟೀಮ್​ ಇಂಡಿಯಾದ ನಾಯಕನಾಗಿ 52 ಪಂದ್ಯಗಳೇ ಕಳೆದಿವೆ. ಸಿಕ್ಕ ಅವಕಾಶದಲ್ಲಿ ಕೊಹ್ಲಿ ಅಬ್ಬರದ ಆಟ ಆಡಿ, ನಾಯಕನ ಜವಾಬ್ದಾರಿ ಮೆರೆದಿದ್ದಾರೆ. 49 ಇನ್ನಿಂಗ್ಸ್​​ಗಳಲ್ಲಿ ವಿರಾಟ್​​ ಮೂರು ಸಾವಿರ ರನ್​ ಗಡಿ ದಾಟಿದ್ರು. ಈ ಮೂಲಕ ಎಬಿಡಿಗಿಂತಲೂ 11 ಇನ್ನಿಂಗ್ಸ್​ ಮುಂಚಿತವಾಗಿಯೇ ಈ ದಾಖಲೆಗೆ ತಮ್ಮ ಹೆಸರು ನಮೂದಿಸಿದ್ರು. ಈ ಪಟ್ಟಿಯಲ್ಲಿ ಧೋನಿ (70 ಇನ್ನಿಂಗ್ಸ್​​), ಸೌರವ್​​ ಗಂಗೂಲಿ (74 ಇನ್ನಿಂಗ್ಸ್​​​), ಸ್ಮಿತ್​​ ಹಾಗೂ ಮಿಸ್ಬಾ ಉಲ್​ ಹಕ್​ (83 ಇನ್ನಿಂಗ್ಸ್​​), ಸನತ್​ ಜಯಸೂರ್ಯ ಮತ್ತು ರಿಕಿ ಪಾಂಟಿಂಗ್​​ (84 ಇನ್ನಿಂಗ್ಸ್​​) ನಂತರದ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್​ ಪ್ರವಾಸದಲ್ಲಿ ನಡೆದ ಟಿ-20 ಸರಣಿಯಲ್ಲೂ ವಿರಾಟ್​ ಬ್ಯಾಟ್​ ಅಬ್ಬರಿಸಿತ್ತು. ಕೊಹ್ಲಿ ಆಡಿದ 56 ಇನ್ನಿಂಗ್ಸ್​​ಗಳಲ್ಲಿ 2000 ರನ್​​ ಗಡಿ ದಾಟಿದ್ರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ರು. ನಂತರ ಈ ಸಾಧನೆಯನ್ನು ರೋಹಿತ್​ ಶರ್ಮಾ ಸಹ ಮಾಡಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...