alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಯ ಓವರ್ ನಲ್ಲಿ ನಡೀತು ಪವಾಡ, ಭಾರತಕ್ಕೆ ರೋಚಕ ಗೆಲುವು

Indian players celebrate their win against Bangladesh in the ICC World Twenty20 2016 cricket match in Bangalore, India, Wednesday, March 23, 2016. (AP Photo/Aijaz Rahi)

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟಿ-20 ಪಂದ್ಯದಲ್ಲಿ, ಭಾರತ 1 ರನ್ ಅಂತರದಿಂದ ಬಾಂಗ್ಲಾ ತಂಡವನ್ನು ಬಗ್ಗು ಬಡಿದಿದೆ. ಕೊನೆಯ ಓವರ್ ವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಹೀರೋ ಆದರು.

ಕೊನೆಯ ಓವರ್ ನಲ್ಲಿ ಬಾಂಗ್ಲಾ ಗೆಲುವಿಗೆ ಬೇಕಿದ್ದುದು 11 ರನ್. ಭಾರತದ ಬೌಲರ್ ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಬಾಲ್ ನಲ್ಲಿ ಸಿಂಗಲ್ ರನ್ ಗಳಿಸಿದ ಬಾಂಗ್ಲಾ ಆಟಗಾರರು, ನಂತರದ ಸತತ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು. ಆಗ ಗೆಲುವಿಗೆ 3 ಬಾಲ್ ಗಳಲ್ಲಿ ಎರಡು ರನ್ ಗಳಿಸಬೇಕಿದ್ದ ಬಾಂಗ್ಲಾ ಗೆದ್ದೇ ಬಿಟ್ಟಿತು ಎನ್ನುವಾಗಲೇ ಪಾಂಡ್ಯ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದರು. ಕೊನೆ ಎಸೆತದಲ್ಲಿ 2 ರನ್ ಗಳಿಸಬೇಕಿದ್ದ ಬಾಂಗ್ಲಾ ಗಳಿಸಿದ್ದು, ಒಂದೇ ರನ್. ಇದರ ಪರಿಣಾಮ ಭಾರತಕ್ಕೆ ಒಂದು ರನ್ ರೋಚಕ ಗೆಲುವು ಸಿಕ್ಕಿತು.

ಮೊದಲಿಗೆ ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ರೋಹಿತ್ ಶರ್ಮ 18, ಶಿಖರ್ ಧವನ್ 23, ವಿರಾಟ್ ಕೊಹ್ಲಿ 24, ಸುರೇಶ್ ರೈನಾ 30, ಹಾರ್ದಿಕ್ ಪಾಂಡ್ಯ 15, ಧೋನಿ ಔಟಾಗದೆ 13 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಅಲ್ ಅಮೀನ್ ಹುಸೇನ್ 2, ಮುಸ್ತಾಫ್ ರೆಹಮಾನ್ 2 ವಿಕೆಟ್ ಪಡೆದರು.

147 ರನ್ ಗೆಲುವಿನ ಗುರಿ ಪಡೆದ ಬಾಂಗ್ಲಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಶಮಿಮ್ ಇಕ್ಬಾಲ್ 35, ಶಬ್ಬೀರ್ ರೆಹಮಾನ್ 26, ಶಾಕಿಬ್ 22 ರನ್ ಗಳಿಸಿದರು. ಭಾರತದ ಪರವಾಗಿ ಆರ್. ಅಶ್ವಿನ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಗಳಿಸಿದರು. ಭಾರತದ ಮುಂದಿನ ಪಂದ್ಯ ಮಾರ್ಚ್ 27 ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...